ಬೆಂಗಳೂರು: ಮದುವೆಯಾಗದಿದ್ದರೆ ಖಾಸಗಿ ಫೋಟೋ ಹರಿಬಿಡುವುದಾಗಿ ಕಿರುಕುಳ ನೀಡುತ್ತಿದ್ದ ಆರೋಪಿ ವಿರುದ್ಧ ಆರ್.ಆರ್. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆಂಚೇನಹಳ್ಳಿ ನಿವಾಸಿಯಾಗಿರುವ 21 ವರ್ಷದ ಯುವತಿ ಕೃಷ್ಣೇಗೌಡ ಎಂಬಾತನ ವಿರುದ್ಧ ದೂರು ನೀಡಿದ್ದಾರೆ. ಮೂರು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಆರೋಪಿ ಹಾಗೂ ಯುವತಿ ಪ್ರೀತಿಸಿದ್ದಾರೆ. ಈ ವಿಚಾರ ಯುವತಿಯ ಪೋಷಕರಿಗೆ ಗೊತ್ತಾಗಿದ್ದು, ಆಕೆ ದೂರವಾಗಿದ್ದಾಳೆ.
ಇದರಿಂದ ಆಕ್ರೋಶಗೊಂಡ ಆರೋಪಿ ಮದುವೆಯಾಗುವಂತೆ ಬಲವಂತ ಮಾಡಿದ್ದಾನೆ. ಅಲ್ಲದೇ, ಯುವತಿಯ ತಾಯಿ ನಡೆಸುತ್ತಿರುವ ಬ್ಯೂಟಿ ಪಾರ್ಲರ್ ಗೆ ಹೋಗಿ ಗಲಾಟೆ ಮಾಡಿದ್ದು, ಮದುವೆಯಾಗದಿದ್ದರೆ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗಿದೆ.