ಮಂಗಳೂರು: ಆನ್ಲೈನ್ ಕ್ಲಾಸ್ ಹಲವು ಅವಾಂತರಕ್ಕೆ ಕಾರಣವಾಗಿದೆ. ಮಕ್ಕಳಿಗೆ ಆನ್ಲೈನ್ ಕ್ಲಾಸ್ ಗಾಗಿ ಪೋಷಕರು ಸ್ಮಾರ್ಟ್ಫೋನ್ ಕೊಡಿಸಿದ್ದಾರೆ. ಆನ್ಲೈನ್ ಕ್ಲಾಸ್ ಮುಗಿದ ನಂತರ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಟ ನಡೆಸುವ ಕುತೂಹಲದಿಂದ ಅವಂತಾರ ಮಾಡಿಕೊಳ್ಳುತ್ತಿದ್ದಾರೆ.
ಮಂಗಳೂರಿನ ಪ್ರತಿಷ್ಠಿತ ಪ್ರೌಢಶಾಲೆಗಳ ಮಕ್ಕಳು ಪೊಲೀಸ್ ಠಾಣೆಗೆ ಅಲೆದಾಡುವಂತಾಗಿದೆ. 8ನೇ ತರಗತಿ ವಿದ್ಯಾರ್ಥಿನಿ ಪರಿಚಯಿಸಿಕೊಂಡ 16 ವರ್ಷದ ಬಾಲಕ ಅಶ್ಲೀಲ ಫೋಟೋ ಕಳುಹಿಸಿದ್ದಾನೆ. ವಿದ್ಯಾರ್ಥಿನಿ ಕೂಡ ಅಶ್ಲೀಲ ಮಾತುಕತೆ ನಡೆಸಿ ಮತ್ತು ಫೋಟೋ ಕಳುಹಿಸಿದ್ದಾಳೆ.
ವಿದ್ಯಾರ್ಥಿನಿಯ ಮೊಬೈಲ್ ನಲ್ಲಿರುವ ಇಮೇಲ್ ಅಕೌಂಟ್ ನಿಂದ ಬಾಲಕನಿಗೆ ಬೆತ್ತಲೆ ಫೋಟೋ ಕಳುಹಿಸಿದ್ದು, ಆಕೆಯ ತಂದೆ ಇ –ಮೇಲ್ ಲಾಗಿನ್ ಆದಾಗ ಬಾಲಕಿ ಮತ್ತು ಬಾಲಕನ ನಡುವೆ ಬೆತ್ತಲೆ ಫೋಟೋ ವಿನಿಮಯವಾಗಿರುವುದು ತಂದೆಗೆ ಗೊತ್ತಾಗಿದೆ. ಇದರಿಂದ ಆಘಾತಕ್ಕೆ ಒಳಗಾದ ಅವರು ಮಗಳನ್ನು ವಿಚಾರಿಸಿದಾಗ ಈ ಸಂಗತಿ ಬಯಲಾಗಿ ಪೊಲೀಸರಿಗೆ ದೂರು ನೀಡಲಾಗಿದೆ ಎನ್ನಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ವಿದ್ಯಾರ್ಥಿನಿಯ ಬೆತ್ತಲೆ ಫೋಟೋ ಪಡೆದುಕೊಂಡ ಬಾಲಕ ತನ್ನ ಗೆಳೆಯನಿಗೆ ತೋರಿಸಿದ್ದಾನೆ. ಆತನೂ ಕೂಡ ಬಾಲಕಿಯೊಂದಿಗೆ ಚಾಟಿಂಗ್ ಮಾಡಿ ಬೆತ್ತಲೆ ಚಿತ್ರ ಕಳಿಸಿಕೊಡುವಂತೆ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎನ್ನಲಾಗಿದೆ. ಇಂತಹ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರತೊಡಗಿದ್ದು, ಪೊಲೀಸರು, ಶಿಕ್ಷಣ ಇಲಾಖೆ, ಪೋಷಕರು, ಶಾಲಾ ಶಿಕ್ಷಕರು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಲಾಗಿದೆ.