2011 ರಲ್ಲಿ ಅಂತರಾಷ್ಟ್ರೀಯ ಏಕದಿನ ವಿಶ್ವಕಪ್ ಗೆದ್ದ ಭಾರತದ ಐತಿಹಾಸಿಕ ಗೆಲುವನ್ನ ಮರೆಯಲು ಸಾಧ್ಯವಿಲ್ಲ. 2011 ರಲ್ಲಿ ಶ್ರೀಲಂಕಾ ವಿರುದ್ಧ ವಿಶ್ವಕಪ್ ಗೆಲ್ಲೋ ಮೂಲಕ 28 ವರ್ಷಗಳ ಪ್ರಶಸ್ತಿ ಬರವನ್ನು ಟೀಂ ಇಂಡಿಯಾ ಕೊನೆಗೊಳಿಸಿತು. ಈ ಐತಿಹಾಸಿಕ ಗೆಲವಿಗೆ 12 ವರ್ಷವಾಗಿದ್ದು, ಈ ಸಂದರ್ಭದಲ್ಲಿ ವಿಶ್ವಕಪ್ ಪಂದ್ಯ ವೀಕ್ಷಿಸಿದ್ದ ಅರ್ಜುನ್ ತೆಂಡೂಲ್ಕರ್ ಮತ್ತು ಪೃಥ್ವಿ ಶಾ ಫೋಟೋ ವೈರಲ್ ಆಗಿದೆ.
ಅಂದು ಯುವಕರಾದ ಪೃಥ್ವಿ ಶಾ ಮತ್ತು ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್, ವಾಂಖೆಡೆ ಸ್ಟೇಡಿಯಂನಲ್ಲಿ ನೇರವಾಗಿ ಪಂದ್ಯ ವೀಕ್ಷಿಸಿದ ಫೋಟೋ ಇದಾಗಿದೆ.
ಚಿತ್ರದಲ್ಲಿ ಇಬ್ಬರೂ ಅಕ್ಕಪಕ್ಕ ಕುಳಿತುಕೊಂಡಿದ್ದಾರೆ . ಅರ್ಜುನ್ ಮುಂಬೈ ಇಂಡಿಯನ್ಸ್ (MI) ಜೆರ್ಸಿಯನ್ನು ತೊಟ್ಟು ಪಂದ್ಯ ವೀಕ್ಷಣೆಯಲ್ಲಿ ಸಂಪೂರ್ಣವಾಗಿ ಮಗ್ನರಾಗಿದ್ದಾರೆ. ಅರ್ಜುನ್ ಮಾತ್ರವಲ್ಲದೆ ಸಾರಾ ಮತ್ತು ಅಂಜಲಿ ತೆಂಡೂಲ್ಕರ್ ಅವರೊಂದಿಗೆ ಪಂದ್ಯವನ್ನು ವೀಕ್ಷಿಸಿದ ಪೃಥ್ವಿ ಶಾ ಫೈನಲ್‌ನ ರಾತ್ರಿಯನ್ನು ನೆನಪಿಸಿಕೊಂಡರು.
ಇಎಸ್‌ಪಿಎನ್‌ಕ್ರಿಕ್‌ಇನ್‌ಫೋಗೆ ನೀಡಿದ ಹಿಂದಿನ ಸಂದರ್ಶನದಲ್ಲಿ, ಪೃಥ್ವಿ ಶಾ ಮಾತನಾಡುತ್ತಾ, “ನಾನು 11 ಅಥವಾ 12 ವರ್ಷ ವಯಸ್ಸಿನವನಾಗಿದ್ದೆ ಮತ್ತು ನಾನು ಫೈನಲ್‌ಗಾಗಿ ವಾಂಖೆಡೆಯಲ್ಲಿದ್ದೆ. ಆಟಗಾರರ ಪಕ್ಕದಲ್ಲಿ ಕುಳಿತು ಅರ್ಜುನ್ ಮತ್ತು ಸಾರಾ ಮತ್ತು ಅಂಜಲಿ ಚಿಕ್ಕಮ್ಮನೊಂದಿಗೆ ಪಂದ್ಯ ವೀಕ್ಷಿಸಿದ್ದೆ” ಎಂದಿದ್ದಾರೆ.
ಈ ವೈರಲ್ ಫೋಟೋ ಈ ಹಿಂದೆ ಅನೇಕ ಬಾರಿ ಇಂಟರ್ನೆಟ್‌ನಲ್ಲಿ ಮರುಕಳಿಸಿದ್ದು ಮತ್ತೊಮ್ಮೆ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆದಿದೆ.
ಅರ್ಜುನ್ ಮತ್ತು ಪೃಥ್ವಿ ಶಾ ಬಾಲ್ಯದ ಗೆಳೆಯರಾಗಿದ್ದು ಒಟ್ಟಿಗೆ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಅವರು ಒಟ್ಟಿಗೆ ಮುಂಬೈ ರಣಜಿ ತಂಡವನ್ನು ಪ್ರತಿನಿಧಿಸಿದರು.