ಲಕ್ನೋ: ಉತ್ತರ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯೊಬ್ಬರು ತರಕಾರಿ ಮಾರುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಯುಪಿ ಸಾರಿಗೆ ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿರುವ ಐಎಎಸ್ ಅಧಿಕಾರಿ ಅಖಿಲೇಶ್ ಮಿಶ್ರಾ ಅವರು ರಸ್ತೆ ಪಕ್ಕದಲ್ಲಿ ತರಕಾರಿ ಮಾರುವ ಮುಖಾಂತರ ಸುದ್ದಿಯಾಗಿದ್ದಾರೆ.
ಮಿಶ್ರಾ ಅವರ ಫೇಸ್ ಬುಕ್ ಖಾತೆಯಲ್ಲಿ ಫೋಟೋ ಪೋಸ್ಟ್ ಮಾಡಲಾಗಿದೆ. ರಸ್ತೆಯ ಪಕ್ಕದಲ್ಲಿ ತರಕಾರಿ ಕೊಡಲು ಕುಳಿತಿರುವ ದೃಶ್ಯವನ್ನು ಫೋಟೋದಲ್ಲಿ ಕಾಣಬಹುದಾಗಿದೆ.
ಇನ್ನು ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇದು ನಿಜವೋ ಅಥವಾ ನಕಲಿಯೋ ಅಂತಾ ಆಶ್ಚರ್ಯಪಟ್ಟಿದ್ದಾರೆ. ಆದರೆ ಈ ಫೋಟೋ ನಕಲಿಯಲ್ಲ ಅಂತಾ ಸ್ವತಃ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
“ಕೆಲ ಅಧಿಕೃತ ಕೆಲಸಕ್ಕಾಗಿ ನಾನು ಪ್ರಯಾಗ್ ರಾಜ್ ಗೆ ಭೇಟಿ ನೀಡಿದ್ದೆ. ಅಲ್ಲಿಂದ ತೆರಳಬೇಕಾದರೆ, ತಾಜಾ ತರಕಾರಿಗಳನ್ನು ನೋಡುತ್ತಾ ರಸ್ತೆ ಬದಿಯ ಮಾರುಕಟ್ಟೆಯಲ್ಲಿ ನಿಲ್ಲಿಸಿದೆ. ಈ ವೇಳೆ, ತರಕಾರಿ ಮಾರುತ್ತಿದ್ದ ವೃದ್ಧೆಯೊಬ್ಬರು ಬಂದು ತನ್ನ ಜೊತೆಯಿದ್ದ ಮಗು ತುಂಬಾ ದೂರ ತೆರಳಿದೆ, ಮಗುವನ್ನು ಕರೆದುಕೊಡು ಬರುವವರೆಗೆ ತನ್ನ ಅಂಗಡಿಯನ್ನು ನೋಡಿಕೊಳ್ಳುವಂತೆ ಹೇಳಿದರು” ಎಂದು ಸ್ಪಷ್ಟಪಡಿಸಿದ್ದಾರೆ.
ಮೈನೆ ಪ್ಯಾರ್ ಕಿಯಾ ಸುಂದರಿ ಭಾಗ್ಯಶ್ರೀ ʼಆರೋಗ್ಯ – ಸೌಂದರ್ಯʼ ಕ್ಕೆ ಕಾರಣವಂತೆ ಅಡುಗೆ ಮನೆಯ ಈ ಪದಾರ್ಥ….!
ಅಧಿಕಾರಿ ಮಿಶ್ರಾ ಅವರು ತರಕಾರಿ ಅಂಗಡಿಯಲ್ಲಿ ಕುಳಿತ ತಕ್ಷಣ ಅವರ ಸ್ನೇಹಿತರೊಬ್ಬರು ಫೋಟೋ ಕ್ಲಿಕ್ಕಿಸಿದರಂತೆ. “ನಾನು ಆಕೆಯ ಅಂಗಡಿಯಲ್ಲಿ ಕುಳಿತಾಗ ಒಬ್ಬ ಗ್ರಾಹಕ ಹಾಗೂ ಮಾರಾಟಗಾರ ಬಂದಿದ್ದಾರೆ. ಈ ವೇಳೆ ಸ್ನೇಹಿತ ತನ್ನ ಮೊಬೈಲ್ ನಿಂದ ಫೋಟೋ ಕ್ಲಿಕ್ಕಿಸಿ ನನ್ನ ಫೇಸ್ ಬುಕ್ ಖಾತೆಯಲ್ಲೇ ಪೋಸ್ಟ್ ಮಾಡಿದ್ದಾರೆ” ಎಂದು ಹೇಳಿದ್ದಾರೆ.