alex Certify ಭಾರತದಲ್ಲಿದೆ ಜಗತ್ತಿನ ಅತಿ ಸ್ವಚ್ಛ ನದಿ; ಜಲಶಕ್ತಿ ಸಚಿವಾಲಯ ಟ್ವೀಟ್‌ ಮಾಡಿದ ಫೋಟೋಗೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿದೆ ಜಗತ್ತಿನ ಅತಿ ಸ್ವಚ್ಛ ನದಿ; ಜಲಶಕ್ತಿ ಸಚಿವಾಲಯ ಟ್ವೀಟ್‌ ಮಾಡಿದ ಫೋಟೋಗೆ ನೆಟ್ಟಿಗರು ಫಿದಾ

ಅಂತರ್ಜಾಲದಲ್ಲಿ ಬಹಳ ದಿನಗಳಿಂದಲೂ ನೆಟ್ಟಿಗರಿಂದ ’ಅಬ್ಬಾ’ ಎನಿಸಿಕೊಳ್ಳುತ್ತಾ ಬಂದಿರುವ ಮೇಘಾಲಯದ ಅಮ್ಗಾಟ್‌ ನದಿಯ ಚಿತ್ರವೊಂದು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ.

ದೇಶದ ಇತರೆ ಯಾವ ನದಿಯಲ್ಲೂ ಸಿಗದ ಪರಿಶುದ್ಧ ಅನುಭವಕ್ಕಾಗಿ ಸಹಸ್ರಾರು ಮಂದಿ ಭೇಟಿ ನೀಡುವ ಅಮ್ಗಾಟ್ ನದಿಯು ಮೇಘಾಲಯದ ಡಾಕಿ ಜಿಲ್ಲೆಯಲ್ಲಿದೆ. ಚಳಿಗಾಲದಲ್ಲಿ ಈ ನದಿಯ ನೀರು ಭಾರೀ ತಿಳಿಯಾಗುವ ಮೂಲಕ ನದಿಯ ತಳವು ಸ್ಪಷ್ಟವಾಗಿ ಕಾಣುತ್ತದೆ.

ದ್ವಿಚಕ್ರ ವಾಹನ ಖರೀದಿಸುವವರಿಗೆ ಬಂಪರ್…! ಆಕರ್ಷಕ ಸಾಲದ ಆಫರ್‌ ಮುಂದಿಟ್ಟ SBI

ಕೇಂದ್ರ ಜಲಶಕ್ತಿ ಸಚಿವಾಲಯ ಇದೀಗ ಈ ನದಿಯ ಹೊಸದೊಂದು ಫೋಟೋ ಟ್ವೀಟ್ ಮಾಡಿದ್ದು, ನದಿಯ ಸ್ಪಟಿಕದಂಥ ನೀರಿನ ಮೇಲೆ ದೋಣಿಯೊಂದು ತೇಲುತ್ತಿರುವುದನ್ನು ನೋಡಬಹುದಾಗಿದೆ. ಸುಸ್ಪಷ್ಟವಾದ ನದಿಯ ನೀರಿನ ಮೂಲಕ ನದಿ ತಳದಲ್ಲಿರುವ ಬಂಡೆಕಲ್ಲುಗಳು ಹಾಗೂ ಮರಳನ್ನು ಸ್ಪಷ್ಟವಾಗಿ ನೋಡಬಹುದಾಗಿದೆ.

“ಜಗತ್ತಿನಲ್ಲೇ ಅತ್ಯಂತ ಶುದ್ಧವಾದ ನದಿಯೊಂದು ಭಾರತದಲ್ಲಿದೆ. ಮೇಘಾಲಯ ರಾಜ್ಯದ ಶಿಲ್ಲಾಂಗ್‌ನಿಂದ 100 ಕಿಮೀ ದೂರದಲ್ಲಿರುವ ಅಮ್ಗಾಟ್ ನದಿಯಲ್ಲಿ ತೇಲುವ ದೋಣಿಯು ಗಾಳಿಯಲ್ಲಿ ಹಾರುತ್ತಿದೆ ಎನಿಸುತ್ತದೆ; ನೀರು ಬಹಳ ಶುದ್ಧ ಹಾಗೂ ಪಾರದರ್ಶಕವಾಗಿದೆ. ನಮ್ಮ ಎಲ್ಲಾ ನದಿಗಳು ಇಷ್ಟೇ ಶುದ್ಧವಾಗಿರಲಿ ಎಂದು ಆಶಿಸುತ್ತೇವೆ. ಮೇಘಾಲಯದ ಜನರಿಗೆ ಅಭಿನಂದನೆಗಳು,” ಎಂದು ಜಲಶಕ್ತಿ ಸಚಿವಾಲಯ ಟ್ವೀಟ್ ಮಾಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...