ಕೇರಳದಲ್ಲಿದೆ ʼಪೌಲ್ ಕೊಯೆಲೋʼ ಹೆಸರಿನ ಆಟೋ…! ಇಂಟ್ರಸ್ಟಿಂಗ್ ಆಗಿದೆ ಇದರ ಹಿಂದಿನ ಕಾರಣ 06-09-2021 11:25AM IST / No Comments / Posted In: Latest News, India, Live News ದೇಸೀ ವಾಹನಗಳಲ್ಲಿ ಕಂಡು ಬರುವ ಕಲಾಚಿತ್ರಗಳು ಹಾಗೂ ಕ್ಯಾಚೀ ನುಡಿಗಟ್ಟುಗಳು ಯಾವಾಗಲೂ ನಮ್ಮ ಗಮನ ಸೆಳೆಯುತ್ತವೆ. ಲಾರಿಗಳು ಹಾಗೂ ಆಟೋರಿಕ್ಷಾಗಳ ಮೇಲಿನ ಬರವಣಿಗೆಯನ್ನು ಬಹುತೇಕ ಎಲ್ಲರೂ ಎಂಜಾಯ್ ಮಾಡುತ್ತಾರೆ. ಇಂಥದ್ದೇ ನಿದರ್ಶನವೊಂದರಲ್ಲಿ ಕೇರಳದ ಆಟೊರಿಕ್ಷಾ ಒಂದರಲ್ಲಿ ಬ್ರೆಜ಼ಿಲ್‌ನ ಪ್ರಖ್ಯಾತ ಬರಹಗಾರ ಪೌಲೋ ಕೊಯೆಲೋ ಹೆಸರನ್ನು ಹಿಂಬದಿಯಲ್ಲಿ ಪೇಂಟ್ ಮಾಡಲಾಗಿದೆ. ಬಟ್ಟೆ ಒಗೆವಾಗ ಕೊಚ್ಚಿಹೋಯ್ತು 190 ಕೋಟಿ….! ಮನೆ ಕದತಟ್ಟಿ ಕೈಕೊಟ್ಟ ʼಅದೃಷ್ಟ ಲಕ್ಷ್ಮಿʼ ಈ ಆಟೋರಿಕ್ಷಾದ ಫೋಟೋವನ್ನು ಖುದ್ದು ಹಂಚಿಕೊಂಡಿರುವ ಕೊಯೆಲೋ, “ಕೇರಳ, ಭಾರತ (ಈ ಫೋಟೋಗಾಗಿ ತುಂಬಾ ಧನ್ಯವಾದ),” ಎಂದು ಕ್ಯಾಪ್ಷನ್ ಹಾಕಿದ್ದಾರೆ. ಜಗತ್ತಿನಾದ್ಯಂತ ಓದುಗರನ್ನು ಹೊಂದಿರುವ ಕೊಯೆಲೋಗೆ ಕೇರಳದ ಎರ್ನಾಕುಲಂನ ಕೆ.ಎ. ಪ್ರದೀಪ್ ಸಹ ಅಭಿಮಾನಿಯಾಗಿದ್ದಾರೆ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿರುವ ಆಟೋ ರಿಕ್ಷಾದ ಮಾಲೀಕ ಇವರೇ ಆಗಿದ್ದಾರೆ. 55 ವರ್ಷ ವಯಸ್ಸಿನ ಪ್ರದೀಪ್, ಮಲೆಯಾಳಂಗೆ ಭಾಷಾಂತರವಾಗಿರುವ ಕೊಯೆಲೋರ 10 ಪುಸ್ತಕಗಳನ್ನು ಓದಿದ್ದಾರೆ. ’ಅಲ್‌ಕೆಮಿಸ್ಟ್’ ಎಂಬ ಹೆಸರಿನಿಂದ ಕರೆಯಲ್ಪಡುವ ತಮ್ಮ ಆಟೋದಲ್ಲಿ ಸಂಚರಿಸುವ ಸಾಹಿತ್ಯಾಸಕ್ತ ಪ್ರಯಾಣಿಕರೊಂದಿಗೆ ಪ್ರದೀಪ್ ಈ ಪುಸ್ತಕಗಳ ಕುರಿತು ಚರ್ಚಿಸುತ್ತಾರಂತೆ. Kerala, India (thank you very much for the photo) pic.twitter.com/13IdqKwsMo — Paulo Coelho (@paulocoelho) September 4, 2021