ಜನರ ಮೋಡಿ ಮಾಡುವ ಐಸ್ ಹೂವುಗಳು: ಪ್ರಕೃತಿಯ ಸೊಬಗಿಗೆ ಬೆರಗಾಗುವಿರಿ 02-01-2023 4:54PM IST / No Comments / Posted In: Latest News, Live News, International ಪ್ರಕೃತಿಯ ಸೌಂದರ್ಯವು ಕಲಾವಿದರು ಮತ್ತು ವಿನ್ಯಾಸಕಾರರಿಗೆ ಸ್ಫೂರ್ತಿಯ ಮೂಲವಾಗಿದೆ ಮತ್ತು ಇದು ನಮಗೆ ಹಲವಾರು ರೀತಿಯಲ್ಲಿ ಆಶ್ಚರ್ಯವನ್ನುಂಟು ಮಾಡುತ್ತದೆ. ಅಂತಹದ್ದೇ ವಿಡಿಯೋ ಒಂದು ವೈರಲ್ ಆಗಿದೆ. ಮಾಜಿ ನಾರ್ವೇಜಿಯನ್ ರಾಜತಾಂತ್ರಿಕ ಎರಿಕ್ ಸೋಲ್ಹೈಮ್ ಅವರು ಈಶಾನ್ಯ ಚೀನಾದ ಸಾಂಗ್ಹುವಾ ನದಿಯಲ್ಲಿ “ಐಸ್ ಹೂಗಳು” ಎಂಬ ಫೋಟೋ ಶೇರ್ ಮಾಡಿಕೊಂಡಿದ್ದು, ಇದು ಬೇರೆಯದ್ದೇ ಲೋಕಕ್ಕೆ ಕೊಂಡೊಯ್ಯುತ್ತದೆ. ಈ ವಿಡಿಯೋದಲ್ಲಿ ಸೂರ್ಯನ ಬೆಳಕಿನಲ್ಲಿ ಹೊಳೆಯುವ ನದಿಯ ನೀರನ್ನು ನೋಡಬಹುದು. ಕಿರಣಗಳು ಹೂವುಗಳಂತೆ ಕಾಣುವ ಅರೆಪಾರದರ್ಶಕ ಮಂಜುಗಡ್ಡೆಯ ರಚನೆಗಳ ಮೇಲೆ ಪ್ರತಿಫಲಿಸುತ್ತದೆ, ನೋಡುಗರನ್ನು ಇದು ಮೋಡಿ ಮಾಡುತ್ತದೆ. “ಪ್ರಕೃತಿಯ ಅದ್ಭುತ! ಈಶಾನ್ಯ ಚೀನಾದ ಸಾಂಗ್ಹುವಾ ನದಿಯಲ್ಲಿ ಐಸ್ ಹೂವುಗಳು” ಎಂಬ ಶೀರ್ಷಿಕೆಯನ್ನು ಇದಕ್ಕೆ ನೀಡಲಾಗಿದ್ದು, ಇದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದಾಗಲೇ ಈ ಪೋಸ್ಟ್ 50 ಸಾವಿರಕ್ಕೂ ಅಧಿಕ ಮಂದಿ ರೀಶೇರ್ ಮಾಡಿಕೊಂಡಿದ್ದಾರೆ. ಪೀಪಲ್ಸ್ ಡೈಲಿ ಚೀನಾ ಪ್ರಕಾರ ಐಸ್ ಹೂವುಗಳ ರಚನೆಯು ಹವಾಮಾನ ಪರಿಸ್ಥಿತಿಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ ಮತ್ತು ಸಾಮಾನ್ಯವಾಗಿ ಪೊದೆಗಳಲ್ಲಿ ಕಂಡುಬರುತ್ತದೆ. Wonderful! ❤️ Ice flowers on Songhua River in northeast China 🇨🇳. pic.twitter.com/9x6z6zlDEi — Erik Solheim (@ErikSolheim) December 30, 2022