
ಶ್ರೀಲಂಕಾದಲ್ಲಿ ಕಳೆದ ಹಲವು ತಿಂಗಳಿನಿಂದ ಪ್ರತಿಭಟನೆ ಫೋಟೋಗಳೇ ಹೆಚ್ಚು ವೈರಲ್ ಆಗಿದ್ದವು. ಇದೀಗ ಲಂಕಾದಲ್ಲಿ ಪ್ರತಿಭಟನೆಯ ನಡುವೆ ಜೋಡಿಯೊಂದು ಚುಂಬಿಸುವ ಫೋಟೋ ಜಗಮೆಚ್ಚುಗೆ ಗಳಿಸಿದೆ.
ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆದಿದೆ. ಪ್ರತಿಭಟನಾಕಾರರು ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರ ನಿವಾಸಕ್ಕೆ ಮುತ್ತಿಗೆ ಹಾಕಿದ ನಂತರ ದಕ್ಷಿಣ ಏಷ್ಯಾದ ದ್ವೀಪದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ಸಿಂಗಾಪುರಕ್ಕೆ ಪಲಾಯನ ಮಾಡಿದ ನಂತರ ರಾಜಪಕ್ಸೆ ರಾಜೀನಾಮೆ ನೀಡಿದರು.
ನಾಗರಿಕರು ಅಧ್ಯಕ್ಷರ ಖಾಸಗಿ ಭವನದ ಮೇಲೆ ದಾಳಿ ಮಾಡುವುದು, ಐಷಾರಾಮಿ ವ್ಯವಸ್ಥೆ ಆನಂದಿಸುವ ಚಿತ್ರಗಳು ದೇಶ ಸ್ಥಿತಿಯನ್ನು ಬಿಂಬಿಸಿದ್ದರೂ, ನೆಟ್ಟಿಗರನ್ನು ರಂಜಿಸುತ್ತಿದೆ.
ಕೊಲಂಬೊದಲ್ಲಿರುವ ಪ್ರಧಾನಿ ಕಚೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಸೇರಿದ್ದ ಅಪಾರ ಸಂಖ್ಯೆ ಜನರ ಸಮ್ಮುಖದಲ್ಲಿ ಹೆಲ್ಮೆಟ್ ಧರಿಸಿರುವ ಪುರುಷ ಮತ್ತು ಮಹಿಳೆ ಚುಂಬಿಸುತ್ತಿರುವ ಫೋಟೋ ಸಾಕಷ್ಟು ಸದ್ದುಮಾಡಿದೆ.
ಕಪಲ್ ಗೋಲ್ಸ್ ! ಕೊಲಂಬೊದಲ್ಲಿನ ಪ್ರಧಾನ ಮಂತ್ರಿ ಕಚೇರಿಯನ್ನು ಸ್ವಾಧಿನಪಡಿಸಿಕೊಳ್ಳಲು ಕಾರಣವಾದ ಸರ್ಕಾರದ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ದಂಪತಿ ಪ್ರೀತಿಯನ್ನು ಪ್ರದರ್ಶಿಸುತ್ತಿರುವುದು ಎಂದು ಶೀರ್ಷಿಕೆ ಕೂಡ ಆ ಫೋಟೋಗಿದೆ.
ಈ ಚಿತ್ರವನ್ನು ಸಾಕಷ್ಟು ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದಾರೆ ಮತ್ತು ವಿವಿಧ ಪ್ರತಿಕ್ರಿಯೆ ಸ್ವೀಕರಿಸಿದ್ದಾರೆ.