ನಾಟಿಂಗ್ ಹ್ಯಾಮ್: ಕ್ರಿಕೆಟ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ವೀಕ್ಷಿಸುವ ಆಟ ಇದಾಗಿದೆ. ಈ ಕ್ರೀಡೆಯ ಕಟ್ಟಾ ಅಭಿಮಾನಿಗಳು ಟಿವಿಯ ಬದಲು ಸ್ವತಃ ಸ್ಟೇಡಿಯಂಗೆ ತೆರಳಿ ಪಂದ್ಯ ವೀಕ್ಷಿಸಲು ಇಷ್ಟಪಡುತ್ತಾರೆ. ಇಂಥವರ ಉಪಸ್ಥಿತಿ ಕೂಡ ಬಹಳ ಪ್ರಾಮುಖ್ಯತೆ ಪಡೆಯುತ್ತದೆ. ಇಂಥದ್ರಲ್ಲಿ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ.
ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಒಂದು ಚಿತ್ರ ಭಾರಿ ವೈರಲ್ ಆಗಿತ್ತು. ಪ್ರೇಕ್ಷಕರ ಗ್ಯಾಲರಿಯಲ್ಲಿ ಮಧ್ಯದಲ್ಲೊಂದು ಖಾಲಿ ಆಸನ ಎದ್ದು ಕಾಣುತ್ತಿತ್ತು. ಸಾಮಾನ್ಯವಾಗಿ ಕ್ರಿಕೆಟ್ ಅಭಿಮಾನಿಗಳಿಂದ ತುಂಬಿ ತುಳುಕುತ್ತಿದ್ದ ಸ್ಟೇಡಿಯಂ ನಲ್ಲಿ ಖಾಲಿ ಖುರ್ಚಿ ನೋಡಿ ಕೆಲವರು ಗೊಂದಲಕ್ಕೊಳಗಾದ್ರು. ಇದರಲ್ಲೂ ಕೂಡ ಒಂದು ಕಥೆಯಿದೆ ಅಂದ್ರೆ ನಂಬ್ತೀರಾ..? ವಿಚಿತ್ರವಾದ್ರು ನಂಬಲೇಬೇಕು.
ಮನೆಗೆ ವಿದ್ಯಾರ್ಥಿನಿ ಕರೆಸಿಕೊಂಡು ಪ್ರಾಧ್ಯಾಪಕನಿಂದ ಅತ್ಯಾಚಾರ
ಜಾನ್ ಕ್ಲಾರ್ಕ್ ಎಂಬಾತ ಕ್ರಿಕೆಟ್ ನ ಬಹು ದೊಡ್ಡ ಅಭಿಮಾನಿಯಂತೆ. ಈತ ಯಾವುದೇ ಒಂದು ಪಂದ್ಯವನ್ನು ಕೂಡ ನೋಡಲು ಮಿಸ್ ಮಾಡುತ್ತಿರಲಿಲ್ಲವಂತೆ. ಆದರೆ ದುರಾದೃಷ್ಟವಶಾತ್ ಇತ್ತೀಚೆಗಷ್ಟೇ ಕ್ಲಾರ್ಕ್ ಕೊನೆಯುಸಿರೆಳೆದಿದ್ದ. ಹೀಗಾಗಿ ಈತನ ನೆನಪಿಗಾಗಿ ಸ್ನೇಹಿತರು ಟಿಕೆಟ್ ಖರೀದಿಸಿ ಖಾಲಿ ಆಸನವನ್ನು ಮೀಸಲಿಟ್ಟಿದ್ದಾರೆ. ಸದ್ಯ ಈ ಕಥೆ ತಿಳಿದ ನೆಟ್ಟಿಗರು ಆನಂದಭಾಷ್ಪ ಸುರಿಸಿದ್ದಾರೆ. ಅಲ್ಲದೆ ‘ಇಂತಹ ಅದ್ಭುತ ಸ್ನೇಹಿತರನ್ನು ಪಡೆದ ನೀನು ಧನ್ಯ’ ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.