ಐಎಎಸ್ ಅಧಿಕಾರಿ ಟೀನಾ ದಾಬಿ, ಆಗಾಗ ಒಂದಿಲ್ಲ ಒಂದು ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಈಗ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಲ್ಲಿರುವುದು ಅವರು ಪೋಸ್ಟ್ ಮಾಡಿರುವ ಫೋಟೋಗಳಿಂದಾಗಿ. ಪ್ರಕೃತಿ ತನ್ನ ಅಪರೂಪದ ಸೌಂದರ್ಯ ಅನಾವರಣ ಮಾಡಿದಾಗ ಎಷ್ಟು ಸುಂದರವಾಗಿ ಕಾಣಿಸುತ್ತೆ ಅಂತ ತೋರಿಸುವ ಫೋಟೋ ಅವುಗಳಾಗಿವೆ.
ಜೈಪುರದಲ್ಲಿ ಹಣಕಾಸು ಇಲಾಖೆಯ ಜಂಟಿ ಜಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಟೀನಾ ದಾಬಿ, ಅದಕ್ಕೂ ಮುಂಚೆ ಇವರು ರಾಜಸ್ತಾನದ ಗೆಹ್ಲೋಟ್ ಸರ್ಕಾರದ ಹಲವು ಪ್ರಮುಖ ಹುದ್ದೆಗಳ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಸದ್ಯಕ್ಕೆ ಅವರು ಜೈಸಲ್ಮೇರ್ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ಧಾರೆ.
ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯವಾಗಿರುವ ಐಎಎಸ್ ಅಧಿಕಾರಿ ಟೀನಾ ದಾಬಿ ಇತ್ತೀಚೆಗೆ ಜೈಸಲ್ಮೇರ್‌ನ ಸೌಂದರ್ಯ ಬಗೆಗಿನ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ಧಾರೆ. ಈ ಫೋಟೋಗಳನ್ನ ನೋಡಿದ ಅಭಿಮಾನಿಗಳು ಅವುಗಳನ್ನ ತುಂಬಾ ಇಷ್ಟಪಟ್ಟಿದ್ದಾರೆ.
ಜೈಸಲ್ಮೇರ್‌ನ ಸುಂದರವಾದ ಫೋಟೋಗಳನ್ನು ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ದಾಬಿ, ಇದು ಮರುಭೂಮಿ ಎಂದರೆ ಯಾರು ನಂಬುತ್ತಾರೆ ಎಂದರೆ ಯಾರೂ ನಂಬೊಲ್ಲ ಎಂದು ಬರೆದುಕೊಂಡಿದ್ದಾರೆ.
ಜೈಸಲ್ಮೇರ್‌ನಲ್ಲಿ ದಾಖಲೆ ಮಟ್ಟದಲ್ಲಿ ಮಳೆ ಸುರಿದ ಬಳಿಕ ಅಲ್ಲಿಗೆ ಅಪರೂಪದ ಪಕ್ಷಿಗಳ ಆಗಮನ ಆರಂಭವಾಗಿದೆ. ಅಷ್ಟೆ ಅಲ್ಲ ಕಲ್ಲಿನ ಗುಡ್ಡಗಾಡು ಪ್ರದೇಶಗಳು ಹಸಿರಿನಿಂದ ಕಂಗೊಳಿಸುತ್ತಿದೆ. ಟೀನಾ ದಾಬಿ ಅವರು UPSCಯ ಎರಡನೇ ಟಾಪರ್ ಐಎಎಸ್ ಅಮೀರ್ ಖಾನ್ ಅವರನ್ನ ಮದುವೆಯಾಗಿದ್ದರು. ಆದರೆ ಅವರ ಮದುವೆ ತುಂಬಾ ದಿನ ಉಳಿಯಲಿಲ್ಲ. 2021ರಲ್ಲಿ ಇಬ್ಬರೂ ವಿಚ್ಛೇದನ ಪಡೆದಿದ್ದಾರೆ. ಇದಾದ ನಂತರ ಟೀನಾ ದಾಬಿ ಐಎಎಸ್ ಪ್ರದೀವ್ ಗವಾಂಡೆ ಅವರನ್ನ ವಿವಾಹವಾಗಿದ್ದಾರೆ.