
ಸನ್‌ಡ್ರೆಸ್ ಹಾಗೂ ತಲೆಗೆ ಸ್ಕಾರ್ಫ್ ಧರಿಸಿ ಪುಟಾಣಿ ಬಾಲಕನೊಬ್ಬನನ್ನು ತೊಡೆ ಮೇಲೆ ಕೂರಿಸಿಕೊಂಡಿರುವ ಮಹಿಳೆಯೊಬ್ಬರು ಆ ಚಿತ್ರದಲ್ಲಿದ್ದರು. ಪಟದ ಹಿಂದೆ, “ಗರ್ಟಿ ಶ್ವಾಟ್ಜೆಲ್ & ಜೆ.ಸಿ ಶ್ವಾಟ್ಜೆಲ್ 1942,” ಎಂದು ಬರೆಯಲಾಗಿತ್ತು. ಫೋಟೋ ಎಲ್ಲಿಯದು ಎಂದು ತಿಳಿಯಲು ಮುಂದಾದ ಪೋಸ್ಟೆನ್, ಕೇಂದ್ರ ಅಮೆರಿಕಾದಲ್ಲಿ ಬಿರುಗಾಳಿಯೆದ್ದ ಕಾರಣದಿಂದ ಡಜ಼ನ್‌ಗಟ್ಟಲೇ ಜನರು ಮೃತಪಟ್ಟಿದ್ದು, ಬಹುಶಃ ಅಲ್ಲಿಂದ ತಾನು ವಾಸಿಸುವ ಇಂಡಿಯಾನಾದ ನ್ಯೂ ಅಲಬಾನಿಗೆ ಓಹಿಯೋ ನದಿಯಲ್ಲಿ ಹರಿದುಕೊಂಡು ಕೆಂಟುಕಿಯ ಲೂಯಿಸ್‌ವಿಲ್ಲೆಯಿಂದ ಬಂದಿರುವ ಸಾಧ್ಯತೆಯನ್ನು ಮನಗಂಡಿದ್ದಾರೆ.
ನೀಲಿ ಚಿತ್ರಗಳ ಕ್ಲಿಪ್ ಮಾರುತ್ತಿದ್ದ ಮೊಬೈಲ್ ಅಂಗಡಿಗಳ ಮೇಲೆ ರೇಡ್
ಯಾರದ್ದೋ ಮನೆಯಲ್ಲಿದ್ದ ಫೋಟೋ ಹೀಗೆ ಬಂದಿದೆ ಎಂದು ಪೋಸ್ಟೆನ್ ಅರಿತುಕೊಂಡಿದ್ದಾರೆ.
ಫೇಸ್ಬುಕ್ ಹಾಗೂ ಟ್ವಟರ್‌ನಲ್ಲಿ ಈ ಫೋಟೋದ ಚಿತ್ರ ಪೋಸ್ಟ್ ಮಾಡಿದ ಪೋಸ್ಟೆನ್, ಅದರ ಮಾಲೀಕರ ಪತ್ತೆಗೆ ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರವನ್ನು ನೋಡುವ ಯಾರಾದರೂ ಅದರ ಮಾಲೀಕರೊಂದಿಗೆ ಸಂಪರ್ಕ ಸಾಧಿಸಲು ನೆರವಾಗುತ್ತಾರೆ ಎಂಬ ಊಹೆಯ ಮೇಲೆ ಹೀಗೆ ಮಾಡಿದ್ದಾರೆ ಪೋಸ್ಟೆನ್.
ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: SC, ST ಕಾಲೋನಿ, ಹಾಡಿ, ತಾಂಡಾ, ಗೊಲ್ಲರಹಟ್ಟಿಗಳಲ್ಲಿ ರೇಷನ್ ಅಂಗಡಿ
ಬಹಳಷ್ಟು ಮಂದಿ ಈ ಚಿತ್ರವನ್ನು ತಮ್ಮ ಪ್ರೊಫೈಲ್‌ನಲ್ಲಿ ರೀಪೋಸ್ಟ್ ಮಾಡಿದ್ದು, ಚಿತ್ರದಲ್ಲಿ ಬರೆಯಲಾಗಿದ್ದ ಹೆಸರಿನ ವ್ಯಕ್ತಿಯೊಬ್ಬರ ಸ್ನೇಹಿತರೊಬ್ಬರು ಈ ಚಿತ್ರವನ್ನು ನೋಡಿ, ಅದಕ್ಕೆ ಆತನನ್ನು ಟ್ಯಾಗ್ ಮಾಡಿದ್ದಾರೆ.
ಕೋಲ್ ಶ್ವಾಟ್ಜೆಲ್ ಹೆಸರಿನ ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿ, ಆ ಚಿತ್ರವು ನ್ಯೂ ಅಲಬಾನಿಯಿಂದ 167 ಕಿಮೀ ದೂರದಲ್ಲಿರುವ ಜಾಗದಲ್ಲಿರುವ, ಕೆಂಟುಕಿಯ ಡಾಸನ್ ಸ್ಪ್ರಿಂಗ್ಸ್‌ನಲ್ಲಿರುವ ಕುಟುಂಬವೊಂದಕ್ಕೆ ಸೇರಿದ್ದು ಎಂದಿದ್ದಾರೆ.
ಡಾಸನ್ ಸ್ಪ್ರಿಂಗ್ಸ್‌ನಲ್ಲಿ ಬಿರುಗಾಳಿಯ ಕಾರಣದಿಂದ ಮನೆಗಳೆಲ್ಲಾ ನೆಲಸಮವಾಗಿದ್ದು, ಮರಗಳು ಬುಡಮೇಲಾಗಿ, ರಕ್ಷಣಾ ಸಿಬ್ಬಂದಿ ಜನರ ರಕ್ಷಣೆಯಲ್ಲಿ ತೊಡಗಿದ್ದರು. ಐದು ರಾಜ್ಯಗಳಲ್ಲಿ ಅಪ್ಪಳಿಸಿದ್ದ ಬಿರುಗಾಳಿಯಿಂದ ಡಜ಼ನ್‌ಗಟ್ಟಲೇ ಜನ ಜೀವ ಕಳೆದುಕೊಂಡಿದ್ದರು.
ಈ ವಾರದಲ್ಲಿ ತನಗೆ ಸಿಕ್ಕ ಚಿತ್ರವನ್ನು ಅದಕ್ಕೆ ಸಂಬಂಧಿಸಿದ ಕುಟುಂಬಕ್ಕೆ ಹಿಂದಿರುಗಿಸಲು ಪೋಸ್ಟೆನ್ ಉದ್ದೇಶಿಸಿದ್ದಾರೆ.