ಮಂಗಳೂರು: ಮಾಜಿ ಪ್ರೇಮಿಯೊಬ್ಬ ಮಹಿಳೆಯ ಬೆತ್ತಲೆ ಚಿತ್ರವನ್ನು ಆಕೆಯ ಗಂಡನಿಗೆ ಕಳುಹಿಸಿದ್ದು, ದಂಪತಿಯ ನಡುವೆ ವೈಷಮ್ಯ ಉಂಟಾಗಿ, ಪತಿ ಡೈವೋರ್ಸ್ ಗೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಸುಬ್ರಹ್ಮಣ್ಯ ಠಾಣಾ ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾಳೆ. ಪುತ್ತೂರು ತಾಲೂಕಿನ ಸುಳ್ಯಪದವಿನ 26 ವರ್ಷದ ಮಹಿಳೆ ಫೋಟೋ ಕಳಿಸಿದ ಯುವಕನ ವಿರುದ್ಧ ದೂರು ನೀಡಿದ್ದಾಳೆ. ಸುಳ್ಯದ ವಿಜೇಶ್ ನನ್ನು ಪ್ರೀತಿಸುತ್ತಿದ್ದ ಯುವತಿ 2016 ರ ನವೆಂಬರ್ ನಲ್ಲಿ ಪುತ್ತೂರಿಗೆ ಕೆಲಸಕ್ಕೆ ಹೋಗಿದ್ದ ವೇಳೆ ಚಹಾ ಕುಡಿಯಲು ಹೋಗಿದ್ದಾರೆ.
ಆರೋಪಿ ಕಾರ್ ನಲ್ಲಿ ಸುರತ್ಕಲ್ ಲಾಡ್ಜ್ ಗೆ ಕರೆದುಕೊಂಡು ಹೋಗಿ ಆಕೆಯ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೇ ಬೆತ್ತಲೆ ವಿಡಿಯೋ ಫೋಟೋಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾನೆ. ಆ ನಂತರದಲ್ಲಿ ಆತ ಕೆಲಸಕ್ಕೆಂದು ವಿದೇಶಕ್ಕೆ ಹೋಗಿದ್ದ. 2021 ರ ಮೇನಲ್ಲಿ ಯುವತಿಗೆ ಬೇರೆ ಯುವಕನೊಂದಿಗೆ ಮದುವೆಯಾಗಿದೆ.
ಈ ವಿಚಾರ ತಿಳಿದ ವಿಜೇಶ್ ವಿದೇಶದಿಂದಲೇ ಯುವತಿಯ ಗಂಡನಿಗೆ ಆಕೆಯ ಬೆತ್ತಲೆ ಫೋಟೋಗಳನ್ನು ಕಳುಹಿಸಿದ್ದಾನೆ. ದಂಪತಿಯ ನಡುವೆ ವೈಷಮ್ಯ ಮೂಡಿದ್ದು, ಪತಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಮಹಿಳೆ ಸುಬ್ರಹ್ಮಣ್ಯ ಪೊಲೀಸರಿಗೆ ದೂರು ನೀಡಿದ್ದಾರೆನ್ನಲಾಗಿದೆ.