ಈ ವಿತ್ತೀಯ ಸರತಿಯಲ್ಲಿ ಫೋನ್‌ಪೇ ಪ್ರಾಥಮಿಕ ಬಂಡವಾಳದ ರೂಪದಲ್ಲಿ $700 ದಶಲಕ್ಷದ ಬಂಡವಾಳ ಕ್ರೋಢೀಕರಿಸುತ್ತಿದೆ. ಇದೇ ವೇಳೆ ವಾಲ್ ಮಾರ್ಟ್ ನೇತೃತ್ವದಲ್ಲಿ ಫ್ಲಿಪ್‌ಕಾರ್ಟ್ ಹೂಡಿಕೆದಾರರು $5.5 ಶತಕೋಟಿ ಬಂಡವಾಳ ಕ್ರೋಢೀಕರಣ ಮಾಡಿದ್ದಾರೆ. ಫೋನ್‌ಪೇ ಫ್ಲಿಪ್‌ಕಾರ್ಟ್‌ನ ಅಂಗ ಸಂಸ್ಥೆಯಾಗಿದೆ.
ಪೂರ್ಣ ಪ್ರಮಾಣದಲ್ಲಿ ಭಾರತದಲ್ಲಿ ಮಾತ್ರ ಕೆಲಸ ಮಾಡುವ ಫೋನ್‌ಪೇ ಚೀನಾದ ಸಂಸ್ಥೆಯಿಂದ ಹರಿದುಬಂದ ಹೂಡಿಕೆಯನ್ನು ಸಿಂಗಪುರದಲ್ಲಿ ನೋಂದಣಿಯಾಗಿರುವ ಕಂಪನಿಗಳ ಶೇರುಗಳ ಖರೀದಿ ಮಾಡಲು ಬಳಸಲಿದೆ.
NPS ಕನಿಷ್ಠ ಪಿಂಚಣಿ ಖಾತರಿ ಸೌಲಭ್ಯ: ಹೊಸಬರು, ಚಂದಾದಾರರಿಗೆ ಸಿಹಿ ಸುದ್ದಿ
ಭಾರತದೊಂದಿಗೆ ನಿಲುಗಡೆ ಹೊಂದಿರುವ ದೇಶಗಳಿಂದ ಹರಿದು ಬರುವ ಹೂಡಿಕೆಗಳ ಮೇಲೆ ನಿರ್ಬಂಧಗಳಿರುವ ಕಾರಣ ಟೆನ್ಸೆಂಟ್‌ನಿಂದ ಬಂದ ಹೂಡಿಕೆಯನ್ನು ಭಾರತದಲ್ಲಿ ಬಳಸಲು ಫೋನ್‌ಪೇ ಮುಂದಾಗಿಲ್ಲ. ಫೋನ್‌ಪೇಯ 87.3%ನಷ್ಟು ಶೇರನ್ನು ಫ್ಲಿಪ್‌ಕಾರ್ಟ್ ಹೊಂದಿದ್ದರೆ ಮಾತೃ ಸಂಸ್ಥೆ ವಾಲ್‌ಮಾರ್ಟ್ ಸಹ ಶೇರು ಹೊಂದಿದೆ. ಟೆನ್ಸೆಂಟ್ 2% ಶೇರನ್ನು ಹೊಂದಿದೆ.