alex Certify ಸಾಮಾಜಿಕ ನ್ಯಾಯ ಎತ್ತಿ ಹಿಡಿದ ದಾರ್ಶನಿಕ ಭಕ್ತ ಕನಕದಾಸರು : ಶಾಸಕ ಕೆ.ಎಸ್. ಬಸವಂತಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾಜಿಕ ನ್ಯಾಯ ಎತ್ತಿ ಹಿಡಿದ ದಾರ್ಶನಿಕ ಭಕ್ತ ಕನಕದಾಸರು : ಶಾಸಕ ಕೆ.ಎಸ್. ಬಸವಂತಪ್ಪ

ದಾವಣಗೆರೆ : ಸಾಮಾಜಿಕ ನ್ಯಾಯ ಎತ್ತಿಹಿಡಿದ ದಾರ್ಶನಿಕ ಭಕ್ತ ಕನಕದಾಸರು ಎಂದು ಶಾಸಕರಾದ ಕೆ.ಎಸ್. ಬಸವಂತಪ್ಪ ಹೇಳಿದರು.

ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕನಕದಾಸರ ಕೀರ್ತನೆಗಳ ಮುಖಾಂತರ ಸಮ ಸಮಾಜ ನಿರ್ಮಾಣವನ್ನು ಮಾಡಲು ಹೋರಾಟ ಮಾಡಿದಂತಹ ವ್ಯಕ್ತಿ ಕನಕದಾಸರು, ಅವರ ಕೀರ್ತನೆಗಳನ್ನು ನಮ್ಮ ಜೀವನದಲ್ಲಿಯೂ ಕೂಡ ಅಳವಡಿಸಿಕೊಳ್ಳಬೇಕು. ನಮ್ಮ ನಡೆ ನುಡಿಯಲ್ಲಾದರೂ ಸ್ವಲ್ಪ ಬದಾಲಾವಣೆ ಮಡಿಕೊಂಡರೆ, ಇಂತಹ ಜಯಂತಿಗೆ ಅರ್ಥಬರುತ್ತದೆ.

ಕನಕದಾಸರ ಸಾಹಿತ್ಯ ಅನುಭವದಿಂದ ಕೂಡಿದೆ, ಅವುಗಳೆಲ್ಲ ಭಕ್ತಿ, ಸಮಾಜ ಚಿಂತನೆಗಳನ್ನು ಒಳಗೊಂಡಿವೆ. ಲೋಕವನ್ನು ಆಡುಭಾμÉಯಲ್ಲಿಯೇ ಹೇಳಿ ತಿದ್ದುವ ಪ್ರಯತ್ನ ಮಾಡಿದ್ದಾರೆ. ಪ್ರತಿಯೊಬ್ಬ ವ್ಯಕ್ತಿ ಹೇಗೆ ಬದುಕಬೇಕು, ಎಂಬುದನ್ನು ತಿಳಿಸಿಕೊಟ್ಟ ದಾರ್ಶನಿಕ. ದ್ವೇಷವನ್ನು ಪ್ರೀತಿಯಿಂದ ಗೆದ್ದು ಸಮಾನತೆಯ ಸಮಾಜ ಕಟ್ಟಲು ನೆರವಾದ ಮಾರ್ಗದರ್ಶಿ ಎಂದು ನುಡಿದರು.

ಅಂಬೇಡ್ಕರ್, ಬಸವಣ್ಣ, ಕನಕದಾಸರ ಈ ಮೂವರ ಚಿಂತನೆಗಳು ಒಂದೇ ಆಗಿದ್ದುದರಿಂದ ಸಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಯಿತು. ಕನಕದಾಸರಿಗೆ ಏಳು ಕೊಪ್ಪರಿಗೆ ಬಂಗಾರವು ಸಿಕ್ಕಿದಾಗ ಅದನ್ನು ತನ್ನ ಸ್ವಾರ್ಥಕ್ಕಾಗಿ ಬಳಸದೇ ಸಮಾಜದ ಉದ್ದಾರಕ್ಕಾಗಿ ನೀಡಿದ ಕೀರ್ತಿ ಅವರಿಗೆ ಸಲುತ್ತದೆ. ಮುಂದಿನ ದಿನಗಳಲ್ಲಿ ಜಯಂತಿಗಳ ಆಚರಣೆಗೆ ಶಾಲಾ, ಕಾಲೇಜು ಮಕ್ಕಳನ್ನು ಕರೆಸಿ ಆಚರಣೆ ಮಾಡಬೇಕೆಂದರು.
ಮಹಾನಗರಪಾಲಿಕೆಯ ಮಹಾಪೌರರಾದ ಚಮನ್ ಸಾಬ್ ಮಾತಾನಾಡಿ ಜಯಂತಿಗಳಿಗೆ ಜನ ಸೇರಿ ಸಂತ, ಶರಣರ ಮಾರ್ಗದರ್ಶವನ್ನು ಮತ್ತು ಅದರಲ್ಲಿರುವ ಅಂಶವನ್ನು ನಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.
ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ ಉಪನ್ಯಾಸ ನೀಡಿದರು.

ಅಪರ ಜಿಲ್ಲಾಧಿಕಾರಿ.ಪಿ.ಎನ್ ಲೋಕೇಶ್, ಜಿ.ಪಂ ಉಪ ಕಾರ್ಯದರ್ಶಿ ಕೃಷ್ಣನಾಯ್ಕ, ಉಪಮಹಾಪೌರರಾದ ಸೋಗಿ ಶಾಂತಕುಮಾರ್, ದೂಡಾ ಆಯುಕ್ತರಾದ ಹುಲುಮನಿ ತಿಮ್ಮಣ್ಣ, ಕುರುಬ ಸಮಾಜದ ಜಿಲ್ಲಾಧ್ಯಕ್ಷರಾದ ಸೋಗಿ ಶಾಂತಕುಮಾರ್, ಕಾರ್ಯದರ್ಶಿ ಲೋಕಿಕೆರೆ ಸಿದ್ದಣ್ಣ, ವಿರೋಧಪಕ್ಷದ ನಾಯಕರಾದ ಪ್ರಸನ್ನ ಕುಮಾರ್, ಮುಖಂಡ ಆನಂದಪ್ಪ ಉಪಸ್ಥಿತರಿದ್ದರು.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...