![](https://kannadadunia.com/wp-content/uploads/2022/12/202106170847508379_Three-missing-after-boat-mishap-in-Patna_SECVPF.jpg)
ಮಂಗಳೂರು: ಪಿಹೆಚ್ ಡಿ ವಿದ್ಯಾರ್ಥಿನಿಯೋರ್ವಳು ಏಕಾಏಕಿ ನಾಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು ಹೊರವಲಯದ ದೇರಳಕಟ್ಟೆಯ ಖಾಸಗಿ ಕಾಲೇಜಿನಲ್ಲಿ ಪಿಹೆಚ್ ಡಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿ 27 ವರ್ಷದ ಚೈತ್ರಾ ನಾಪತ್ತೆಯಾದವರು. ಪಿಜಿಯಲ್ಲಿದ್ದು ಓದುತ್ತಿದ್ದರು.
ತಂದೆಯನ್ನು ಕಳೆದುಕೊಂಡಿದ್ದ ಚೈತ್ರಾ ದೊಡ್ಡಪ್ಪನ ಆಶ್ರಯದಲ್ಲಿದ್ದರು. ದೇರಳಕಟ್ಟೆಯ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಎಂಎಸ್ ಸಿ ಮುಗಿಸಿದ ಬಳಿಕ ಕೋಟೆಕಾರು ಬಳಿಯ ಖಾಸಗಿ ಪಿಜಿಯಲ್ಲಿದ್ದುಕೊಂಡು ಫುಡ್ ಸೆಕ್ಯುರಿಟಿ ವಿಷಯದ ಮೇಲೆ ಪಿಹೆಚ್ ಡಿ ಅಧ್ಯಯನ ನಡೆಸಿದ್ದರು.
ಫೆ.17ರಂದು ಎಂದಿನಂತೆ ತನ್ನ ಸ್ಕೂಟರ್ ನಲ್ಲಿ ತೆರಳಿರುವ ಚೈತ್ರಾ ವಾಪಾಸ್ ಆಗಿಲ್ಲ. ಚೈತ್ರಾ ನಾಪತ್ತೆಯಾಗಿರುವ ಬಗ್ಗೆ ಆಕೆಯ ದೊಡ್ಡಪ್ಪ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.