alex Certify ಪಿಜಿ ಮೆಡಿಕಲ್ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: ಸೀಟು ರದ್ದುಪಡಿಸಲು ಅವಕಾಶ, ದಂಡದ ಮೊತ್ತ ವಾಪಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಜಿ ಮೆಡಿಕಲ್ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: ಸೀಟು ರದ್ದುಪಡಿಸಲು ಅವಕಾಶ, ದಂಡದ ಮೊತ್ತ ವಾಪಸ್

ಬೆಂಗಳೂರು: PG Medical ಮಾಪ್‌ ಅಪ್‌ ಸುತ್ತಿನಲ್ಲಿ ಸೀಟು ಪಡೆದ ಅಭ್ಯರ್ಥಿಗಳು ತಮ್ಮ ಸೀಟನ್ನು ರದ್ದುಪಡಿಸಿಕೊಳ್ಳಲು ಇಚ್ಛಿಸಿದಲ್ಲಿ ಫೆ.17ರೊಳಗೆ ದಂಡ ಇಲ್ಲದೆ ರದ್ದುಪಡಿಸಿಕೊಳ್ಳಬಹುದು. ಈ ಸುತ್ತಿನಲ್ಲಿ ಸಿಕ್ಕ ಸೀಟನ್ನು ಈಗಾಗಲೇ ದಂಡ ಕಟ್ಟಿ ರದ್ದುಪಡಿಸಿಕೊಂಡಿದ್ದಲ್ಲಿ ಅಂತಹವರಿಗೆ ದಂಡದ ಮೊತ್ತ ಹಿಂದಿರುಗಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ರಿಟ್ ಅರ್ಜಿ ಸಂಖ್ಯೆ: 4065/2025 ರಲ್ಲಿ ಮಾನ್ಯ ಉಚ್ಚ ನ್ಯಾಯಾಲಯವು 13-02-2025 ರಂದು ಆದೇಶಿಸಿರುವಂತೆ ಮಾಪ್ ಅಪ್ ಸುತ್ತಿನಲ್ಲಿ ಪಿಜಿವೈದ್ಯಕೀಯ ಸೀಟು ಹಂಚಿಕೆ ಮಾಡಿಕೊಂಡಿರುವ ಅಭ್ಯರ್ಥಿಗಳು, ಸೀಟನ್ನು ರದ್ದು ಪಡಿಸಿಕೊಳ್ಳಲು ಇಚ್ಚಿಸಿದಲ್ಲಿ ದಿನಾಂಕ 17-02-2025 ರ ಸಂಜೆ 4.00 ರೊಳಗೆ ರದ್ದುಪಡಿಸಿಕೊಳ್ಳತಕ್ಕದ್ದು, ಅಂತಹ ಅಭ್ಯರ್ಥಿಗಳಿಗೆ ಮೇಲ್ಕಂಡ ಮಾನ್ಯ ಉಚ್ಚ ನ್ಯಾಯಾಲಯದ ಆದೇಶದ ಅನ್ವಯ ದಂಡ ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ. ಸೀಟನ್ನು ರದ್ದುಪಡಿಸಿಕೊಳ್ಳಲು ಅಭ್ಯರ್ಥಿಗಳು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಖುದ್ದಾಗಿ ಪ್ರಾಧಿಕಾರದಲ್ಲಿ ಹಾಜರಾಗುವುದು.

ಮುಂದುವರಿದು, 2024 ರ ಮಾಪ್ ಅಪ್ ಸುತ್ತಿನಲ್ಲಿ ಹಂಚಿಕೆಯಾದ ಪಿಜಿವೈದ್ಯಕೀಯ ಸೀಟನ್ನು ಈಗಾಗಲೆ ರದ್ದು ಪಡಿಸಿಕೊಂಡು ದಂಡವನ್ನು ಪಾವತಿಸಿದ್ದಲ್ಲಿ, ಅಂತಹ ಅಭ್ಯರ್ಥಿಗಳಿಗೆ ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಮುಂದಿನ ದಿನಗಳಲ್ಲಿ ಹಿಂದಿರುಗಿಸಲಾಗುವುದು ಎಂದು ಹೇಳಲಾಗಿದೆ.

ಸಹಾಯವಾಣಿ: 080-23 460 460.

ಇ-ಮೇಲ್: keauthority-ka@nic.in

ವೆಬ್‌ಸೈಟ್: http://kea.kar.nic.in

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...