
ಬೆಂಗಳೂರು: ಇನ್ಮುಂದೆ ರಾಜಧಾನಿ ಬೆಂಗಳೂರಿನಲ್ಲಿ ಹಾಸ್ಟೇಲ್, ಪಿಜಿಗಳ ತಿಂಗಳ ಬಾಡಿಗೆ ಇನ್ನಷ್ಟು ಏರಿಕೆಯಾಗಲಿದೆ. ಖಾಸಗಿ ಹಾಸ್ಟೇಲ್, ಪಿಜಿ ಬಾಡಿಗೆಗಳಿಗೆ ಜಿಎಸ್ ಟಿ ಅನ್ವಯವಾಗಲಿದೆ.
ಹಾಸ್ಟೇಲ್, ಪಿಜಿಗಳನ್ನು ವಸತಿ ಕಟ್ಟಡಗಳಿಗೆ ಹೋಲಿಸಲಾಗದು, ಅವುಗಳಿಗೆ ತೆರಿಗೆ ವಿನಾಯಿತಿ ನೀಡಲಾಗದು. ಹಾಗಾಗಿ ಎಲ್ಲಾ ಪಿಜಿ, ಹಾಸ್ಟೇಲ್ ಗಳಿಗೆ ಜಿಎಸ್ ಟಿ ಅಡ್ವಾನ್ಸ್ ರೂಲಿಂಗ್ಸ್ (ಎಆರ್) ನಿಗದಿಪಡಿಸಲಾಗಿದ್ದು, ಬಾಡಿಗೆ ಇನ್ನಷ್ಟು ದುಬಾರಿಯಾಗಲಿದೆ. ಇದರಿಂದ ವಿದ್ಯಾರ್ಥಿಗಳಿಗೆ, ಸಣ್ಣಪುಟ್ಟ ಕೆಲಸದಲ್ಲಿರುವವರಿಗೆ ಮತ್ತಷ್ಟು ಹೊರೆಯಾಗಲಿದೆ.
ಹಾಸ್ಟೇಲ್ ಹಾಗೂ ಪಿಜಿಗಳಿಗೆ ಜಿಎಸ್ ಟಿ ವಿನಾಯಿತಿ ನೀಡಬೇಕು ಎಂಬ ಮನವಿ ಬಗ್ಗೆ ಆಲಿಸಿದ ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ಸ್ ಹಾಸ್ಟೇಲ್, ಪಿಜಿಗಳಿಗೆ ಜಿಎಸ್ ಟಿ ವಿನಾಯಿತಿ ನೀಡಲು ಆಗಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಶೇ.12ರಷ್ಟು ಜಿಎಸ್ ಟಿ ಅನ್ವಯವಾಗಲಿದೆ ಎಂದು ತಿಳಿಸಿದೆ.
ಇದರಿಂದ ಇನ್ಮುಂದೆ ನೊಂದಾಯಿತ ಪಿಜಿ, ಹಾಸ್ಟೇಲ್ ಗಳ ತಿಂಗಳ ಬಾಡಿಗೆ ಮೇಲೆ ಶೇ.12ರಷ್ಟು ಜಿಎಸ್ ಟಿ ತೆರಿಗೆ ಅನ್ವಯವಾಗಲಿದೆ. ಅಗತ್ಯವಸ್ತುಗಳು, ತರಕಾರಿ ಬೆಲೆ ಏರಿಕೆಯಾಗಿರುವುದರಿಂದ ಈಗಾಗಲೇ ಪಿಜಿ, ಹಾಸ್ಟೇಲ್ ಬಾಡಿಗೆಯನ್ನು ಏರಿಸಲಾಗಿದೆ. ಇನ್ನುಮುಂದೆ ಜಿಎಸ್ ಟಿ ಹೊರೆ ಕೂಡ ಬೀಳಲಿದೆ.