
ಬೆಂಗಳೂರು: ಬೆಂಗಳೂರಿನ ಪಿಜಿಗಳಲ್ಲಿ ಕನ್ನಹಾಕಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಮಹಿಳೆಯನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜೇಶ್ವರಿ ಬಂಧಿತ ಮಹಿಳೆ. ಬಂಧಿತ ಆರೋಪಿಯಿಂದ 7.80 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಪಿಜಿಯಲ್ಲಿದ್ದುಕೊಂಡು ತನ್ನದೇ ಹೆಸರಿನ ಇನ್ನೋರ್ವ ಮಹಿಳೆಯ ಚಿನ್ನಾಭರಣಗಳನ್ನು ಕಳುವು ಮಡಿದ್ದಳು.
ಹಲಸೂರು ಗೇಟ್ ಬಳಿಯ ರಾಜೇಶ್ವರಿ ಪಿಜಿಯಲ್ಲಿ ವಾಸವಾಗಿದ್ದ ರಾಜೇಶ್ವರಿ ಎಂಬುವವರ ಚಿನ್ನಾಭರಣಗಳನ್ನು ಬಂಧಿತ ಮಹಿಳೆ ಕದ್ದಿದ್ದಳು. ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.