ಬೆಂಗಳೂರು: ಸ್ನಾತಕೋತ್ತರ ದಂತ ವೈದ್ಯಕೀಯ ಪ್ರವೇಶಕ್ಕೆ ಮಾಪ್ ಅಪ್ ಸುತ್ತಿನ ಸೀಟು ಹಂಚಿಕೆ ಜನವರಿ 31 ರಂದು ನಡೆಯಲಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಈ ಬಗ್ಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ. 2021 ನೇ ಸಾಲಿನ ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಜನವರಿ 31 ರಂದು ಸೀಟು ಹಂಚಿಕೆ ನಡೆಯಲಿದೆ. ದಾಖಲಾತಿ ಪರಿಶೀಲನೆ ಮಾಡಿಕೊಂಡು ಸೀಟು ಹಂಚಿಕೆಯಾಗದಿರುವ ಅಭ್ಯರ್ಥಿಗಳು ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಹಾಜರಾಗಬಹುದು.
ಜನವರಿ 31 ರಂದು ನಡೆಯಲಿರುವ ಮಾಪ್ ಅಪ್ ಸುತ್ತಿನಲ್ಲಿ ಸೀಟುಗಳು ಮುಗಿದಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆ ಸ್ಥಗಿತಗೊಳಿಸಲಾಗುತ್ತದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ http://kea.kar.nic.in ವೆಬ್ ಸೈಟ್ ನಲ್ಲಿ ಸೀಟು ಲಭ್ಯತೆ ಪರಿಶೀಲಿಸುವಂತೆ ಸೂಚಿಸಲಾಗಿದೆ.