
ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳ 2024ನೇ ಸಾಲಿನ ಪ್ರವೇಶಕ್ಕಾಗಿ ಸ್ಟೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಿದೆ.
ಆಪ್ಷನ್ ದಾಖಲಿಸಲು ಫೆಬ್ರವರಿ 24ರ ವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ. ಈ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವವರು ಮುಂಗಡವಾಗಿ 5 ಲಕ್ಷ ರೂ. ಪಾವತಿಸಬೇಕು. ಸೀಟು ಹಂಚಿಕೆ ತಾತ್ಕಾಲಿಕ ಫಲಿತಾಂಶವನ್ನು ಫೆಬ್ರವರಿ 24ರ ರಾತ್ರಿ 8 ಗಂಟೆಗೆ ಪ್ರಕಟಿಸಲಾಗುವುದು. ಫೆಬ್ರವರಿ 25ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು. ಶುಲ್ಕ ಪಾವತಿಸಿ ಕಾಲೇಜಿಗೆ ವರದಿ ಮಾಡಿಕೊಳ್ಳಲು ಫೆಬ್ರವರಿ 28 ಕೊನೆಯ ದಿನವಾಗಿದೆ.
ಸೀಟು ಹಂಚಿಕೆಯ ನಂತರ ಮುಂಗಡ ಹಣವನ್ನು ಶುಲ್ಕದ ಜೊತೆ ಹೊಂದಾಣಿಕೆ ಮಾಡಲಾಗುವುದು. ಸೀಟು ಹಂಚಿಕೆ ಬಳಿಕ ಪ್ರವೇಶ ಪಡೆಯದಿದ್ದಲ್ಲಿ ಮುಂಗಡ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ದಂಡ ಕೂಡ ವಿಧಿಸಲಾಗುವುದು. ಅಂತವರನ್ನು ಮುಂದಿನ ವರ್ಷದ ಎಂಸಿಸಿ ಕೌನ್ಸೆಲಿಂಗ್ ಸೇರಿ ಪಿಜಿ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ನಿರ್ಬಂಧಿಸಲಾಗುವುದು ಎಂದು ಹೇಳಲಾಗಿದೆ.