ಕೊರೊನಾ ಲಸಿಕೆಯ ತುರ್ತು ಬಳಕೆಗೆ ಪರವಾನಗಿ ಕೇಳಿ ಅರ್ಜಿ ಸಲ್ಲಿಸುವಂತೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಫೈಜರ್, ಜಾನ್ಸನ್ & ಜಾನ್ಸನ್ ಕಂಪನಿಗಳಿಗೆ ಸೂಚನೆ ನೀಡಿದೆ. ಈ ರೀತಿ ಅರ್ಜಿ ಸಲ್ಲಿಸೋದ್ರಿಂದ ತುರ್ತು ಅನುಮತಿ ನೀಡೋದು ಸುಲಭವಾಗುತ್ತದೆ. ಆದರೆ ಫಾರ್ಮಾ ಕಂಪನಿಗಳು ಇಲ್ಲಿಯವರೆಗೆ ಅರ್ಜಿ ಸಲ್ಲಿಕೆ ಮಾಡಿಲ್ಲ.
ಡ್ರಗ್ ರೆಗ್ಯೂಲೇಟರ್ ಜನರಲ್ ಆಫ್ ಇಂಡಿಯಾ ಅರ್ಜಿ ಸಲ್ಲಿಸುವಂತೆ ಮಾಡಿದ ಸೂಚನೆಗೆ ಫಾರ್ಮಾ ಕಂಪನಿಗಳು ನಾವು ಈ ಬಗ್ಗೆ ಕೆಲಸ ಮಾಡ್ತಿರೋದಾಗಿ ಹೇಳಿವೆ ಎನ್ನಲಾಗಿದೆ.
ಇನ್ನೊಂದು ದೈತ್ಯ ಫಾರ್ಮಾ ಕಂಪನಿ ಮಾಡೆರ್ನಾ ಶೀಘ್ರದಲ್ಲೇ ಭಾರತಕ್ಕೆ 7 ಮಿಲಿಯನ್ ಡೋಸ್ ಲಸಿಕೆಗಳನ್ನ ನೀಡಲಿದೆ. ಮಾಡೆರ್ನಾ ಲಸಿಕೆಗಳಿಗೆ ಡಿಸಿಜಿಐ ಅನುಮತಿ ನೀಡಿದ್ದು ಅಮೆರಿಕದಿಂದ ಈ ಲಸಿಕೆಗಳನ್ನ ದೇಶಕ್ಕೆ ತರಿಸಿ ವಿತರಣೆ ಮಾಡುವ ಜವಾಬ್ದಾರಿಯನ್ನ ಸಿಪ್ಲಾ ಕಂಪನಿ ಹೊತ್ತುಕೊಂಡಿದೆ.
ಕೆಲ ದಿನಗಳ ಹಿಂದಷ್ಟೇ ಲಸಿಕೆಗಳ ವಿಚಾರವಾಗಿ ಮಾತನಾಡಿದ ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪಾಲ್, ಆರಂಭಿಕ ಹಂತದ ಮಾತುಕತೆ ನಡೆದಿದೆ. ಆದರೆ ಫಾರ್ಮಾ ಕಂಪನಿಗಳಿಂದ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಸಕಾರಾತ್ಮಕ ಬೆಳವಣಿಗೆ ಇದೆ ಎಂದು ಹೇಳಿದ್ದರು.