ಫೀಜರ್ ಕೋವಿಡ್-19 ಲಸಿಕೆ ಪ್ರಯೋಗ ಯಶಸ್ವಿಯಾಗಿದೆ ಎಂದು ಅಮೆರಿಕದ ಉನ್ನತ ಸಾಂಕ್ರಮಿಕ ರೋಗ ವಿಭಾಗದ ನಿರ್ದೇಶಕ ಡಾ. ಆಂಥೋನಿ ಫೌಸಿ ತಿಳಿಸಿದ್ದಾರೆ.
ಜರ್ಮನಿಯ ಬಯೋಟೆಕ್ ಎಸ್ಇ ಸಹಯೋಗದಲ್ಲಿ ಗೆ ಅಭಿವೃದ್ಧಿಪಡಿಸಲಾದ ಫೀಜರ್ ಲಸಿಕೆ ಅಸಾಧಾರಣವಾಗಿದೆ. ಪರಿಣಾಮಕಾರಿಯಾದ ಲಸಿಕೆ ಶೇಕಡ 90 ರಿಂದ 95 ರಷ್ಟು ಯಶಸ್ವಿ ಎನ್ನುವುದು ತಿಳಿದುಬಂದಿದೆ.
ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಅಲರ್ಜಿ ಹಾಗೂ ಸಾಂಕ್ರಾಮಿಕ ರೋಗಗಳ ನಿರ್ದೇಶಕರಾಗಿರುವ ಆಂಥೋನಿ ಫೌಸಿ ಅವರು ನೀಡಿರುವ ಮಾಹಿತಿಯಂತೆ, ಡಿಸೆಂಬರ್ ಕೊನೆಯಲ್ಲಿ ಅಮೆರಿಕದಲ್ಲಿ ಆದ್ಯತೆಯ ಗುಂಪುಗಳಿಗೆ ಲಸಿಕೆ ನೀಡಲು ಆರಂಭಿಸಬಹುದು ಎಂದು ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಆಡಳಿತ ಲಸಿಕೆಯನ್ನು ಈ ವರ್ಷಾಂತ್ಯದ ವೇಳೆಗೆ ಅಮೆರಿಕನ್ನರಿಗೆ ನೀಡಲು ಅಗತ್ಯ ತಯಾರಿ ಮಾಡಿಕೊಳ್ಳತೊಡಗಿದೆ. ಪ್ರಯೋಗದಲ್ಲಿ ಲಸಿಕೆ ಯಶಸ್ವಿಯಾಗಿದ್ದು, ಆದಷ್ಟು ಬೇಗನೆ ಆದ್ಯತಾ ವಲಯದವರಿಗೆ ಇದನ್ನು ನೀಡಲಾಗುವುದು ಎಂದು ಹೇಳಲಾಗಿದೆ.