ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗಳು ಮಕ್ಕಳ ಭವಿಷ್ಯದ ಜತೆ ಆಟವಾಡುತ್ತಿವೆ. ಈ ಸಂಘಟನೆಗಳಿಂದಾಗಿಯೇ ವಿದ್ಯಾರ್ಥಿಗಳು ದಾರಿ ತಪ್ಪುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕಿಡಿ ಕಾರಿದ್ದಾರೆ.
ಪಿಎಫ್ಐ ಹಾಗೂ ಸಿಎಫ್ಐ ಸಂಘಟನೆಗಳು ಹಿಜಾಬ್ ವಿದ್ಯಾರ್ಥಿನಿಯರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿರಬಹುದು. ಈ ಸಂಘಟನೆಗಳು ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.
ಪತಿ ಜೊತೆ ಜಗಳವಾಡಿಕೊಂಡ ಮಹಿಳೆ ಮಾಡಿದ್ದಾಳೆ ಇಂಥಾ ಕೆಲಸ….! ವಿಡಿಯೋ ನೋಡಿ ದಂಗಾಗಿದ್ದಾರೆ ಜನ
ದ್ವಿತೀಯ ಪಿಯು ಪರೀಕ್ಷೆ ಬರೆಯಲೆಂದು ಬಂದ ಹಿಜಾಬ್ ಹೋರಾಟಗಾರ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೇ ವಾಪಸ್ ಆಗಿದ್ದಾರೆ. ಪಿಎಫ್ಐ, ಸಿಎಫ್ಐ ಸಂಘಟನೆಗಳ ಕುಮ್ಮಕ್ಕಿನಿಂದಾಗಿಯೇ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಜನವರಿಯಿಂದ ಇಲ್ಲಿಯವರೆಗೂ 6 ಮಕ್ಕಳ ಮನವೊಲಿಕೆಗೆ ಪ್ರಯತ್ನ ಮಾಡಲಾಗಿದೆ. ಆದರೆ ನಾವು ವಿದ್ಯಾರ್ಥಿನಿಯರ ಮನವೊಲಿಸಲು ಎಷ್ಟು ಪ್ರಯತ್ನ ಮಾಡಿದ್ದೇವೋ ಅದಕ್ಕಿಂತ ಹೆಚ್ಚು ಬೇರೆ ಸಂಘಟನೆಗಳು ಅವರ ಮನವೊಲಿಕೆ ಮಾಡಿದ್ದಾರೆ. 6 ವಿದ್ಯಾರ್ಥಿನಿಯರು ಮಾತ್ರ ಪರೀಕ್ಷೆ ಬರೆಯದೇ ಇದ್ದಾರೆ. ಆದರೆ 1 ಲಕ್ಷ ಮುಸ್ಲಿಂ ಸಮುದಾಯಕ್ಕೆ ಸೇರಿದ ಮಕ್ಕಳಲ್ಲಿ 82 ಸಾವಿರ ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುತ್ತಿದ್ದಾರೆ ಎಂಬುದನ್ನು ಪರಿಗಣಿಸಬೇಕು. 6 ವಿದ್ಯಾರ್ಥಿನಿಯರ ವಾದಕ್ಕೆ ಕೋರ್ಟ್ ಕೂಡ ಮನ್ನಣೆ ನೀಡಿಲ್ಲ. ವಿದ್ಯಾರ್ಥಿನಿಯರು ಭವಿಷ್ಯ ಹಾಳುಮಾಡಿಕೊಳ್ಳಬಾರದು ಎಂದು ಹೇಳಿದರು.