ಕೊಚ್ಚಿ: ಕೇರಳ ಸಾರಿಗೆ ಸಂಸ್ಥೆಗೆ 5 ಕೋಟಿ ರೂ. ನಷ್ಟ ಭರಿಸಿಕೊಡುವಂತೆ ನಿಷೇಧಿತ ಪಿಎಫ್ಐ ಸಂಘಟನೆ ಕಾರ್ಯದರ್ಶಿಗೆ ಕೇರಳ ಹೈಕೋರ್ಟ್ ಆದೇಶಿಸಿದೆ.
ಎನ್ಐಎ ದಾಳಿ ವಿರೋಧಿಸಿ ಸೆ. 23 ರಂದು ಕೇರಳ ಬಂದ್ ಗೆ ಕರೆ ನೀಡಿದ್ದ ವೇಳೆ ಹಿಂಸಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಂಟಾದ ಹಾನಿಗೆ 5 ಕೋಟಿ ರೂ. ನಷ್ಟ ತುಂಬಿಕೊಡಲು ಆದೇಶಿಸಲಾಗಿದೆ.
ಪ್ರಸ್ತುತ ನಿಷೇಧವಾಗಿರುವ ಪಿಎಫ್ಐ ಸಂಘಟನೆ ಸೆ. 23 ರಂದು ಎನ್ಐಎ ದಾಳಿ ವಿರೋಧಿಸಿ ಕೇರಳ ಬಂದ್ ಗೆ ಕರೆ ನೀಡಿತ್ತು. ಈ ವೇಳೆ ಹಿಂಸಾಚಾರ ನಡೆದು ಹಾನಿ ಉಂಟಾಗಿದ್ದು, ಕೇರಳ ರಸ್ತೆ ಸಾರಿಗೆ ಸಂಸ್ಥೆಗೆ 5 ಕೋಟಿ ರೂಪಾಯಿ ನಷ್ಟ ತುಂಬಿಕೊಡಬೇಕು ಎಂದು ಕೇರಳ ಹೈಕೋರ್ಟ್ ಆದೇಶಿಸಿದೆ.
ಪ್ರತಿಭಟನೆಗೆ ಕರೆ ನೀಡಿದ ನಂತರ ಹಿಂಸಾಚಾರಕ್ಕೂ ತನಗೂ ಸಂಬಂಧವಿಲ್ಲ ಎಂದು ಹೇಳಲಾಗದು. ಅಂದು ನಡೆದ ಘಟನೆಗೆ ಸಂಬಂಧಿಸಿದಂತೆ ಉಂಟಾದ ಹಾನಿಗೆ ಕೇರಳ ಸಾರಿಗೆ ಸಂಸ್ಥೆಗೆ 5 ಕೋಟಿ ರೂ ನೀಡುವಂತೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಗೆ ಹೈಕೋರ್ಟ್ ಸೂಚಿಸಿದ್ದು, ಹಣ ನೀಡದದಿದ್ದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಯಾವುದೇ ಪಿಎಫ್ಐ ಮುಖಂಡರಿಗೆ ಜಾಮೀನು ನೀಡುವುದಿಲ್ಲ ಎಂದು ತಿಳಿಸಿದೆ.