ಕಾರ್ಮಿಕರ ಪಿಂಚಣಿ ನಿಧಿ ಸಂಸ್ಥೆಯಲ್ಲಿ ನಿಮ್ಮ ಹೆಸರು ಮತ್ತು ಜನ್ಮ ದಿನಾಂಕವನ್ನು ಆಧಾರ್‌ನಲ್ಲಿ ಇರುವಂತೆ ಬದಲಿಸಲು ಹೀಗೆ ಮಾಡಿ:
1. ಏಕೀಕೃತ ಪೋರ್ಟಲ್ ಜಾಲತಾಣಕ್ಕೆ ಭೇಟಿ ಕೊಡಿ (https://unifiedportal-mem.epfindia.gov.in/memberinterface/)
2. ನಿಮ್ಮ ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್), ಪಾಸ್‌ವರ್ಡ್ ವಿವರಗಳು ಮತ್ತು ಕ್ಯಾಪ್ಚಾ ಒದಗಿಸಿ.
3. ಸೈನ್-ಇನ್ ಆಗಿ. Manage and then Modify Basic Details ಮೇಲೆ ಕ್ಲಿಕ್ ಮಾಡಿ.
4. Save/Submit>Yes ಮೇಲೆ ಕ್ಲಿಕ್ ಮಾಡಿ. ಸರಿಯಾದ ಆಧಾರ್, ಹೆಸರು ಮತ್ತು ಜನ್ಮ ದಿನಾಂಕ ನಮೂದಿಸಿ.
5. ”Update Details” ಕ್ಲಿಕ್ ಮಾಡುತ್ತಲೇ, ನಿಮ್ಮ ಹೆಸರು ಬದಲಾವಣೆಗೆ ಅನುಮೋದನೆ ನೀಡಲು ಕೋರಿ ನಿಮ್ಮ ಕಂಪನಿಗೆ ವಿನಂತಿ ಕಳಿಸಲಾಗುತ್ತದೆ.
ಸ್ಥಗಿತಗೊಂಡ ಕಂಪನಿಯಲ್ಲಿ PF ಹಣ ಸಿಕ್ಕಿಬಿದ್ರೆ ಏನು ಮಾಡ್ಬೇಕು…? ಇಲ್ಲಿದೆ ವಿವರವಾದ ಮಾಹಿತಿ
ಇದಾದ ಬಳಿಕ ಉದ್ಯೋಗದಾತರು ಸಂಬಂಧಪಟ್ಟ ಉದ್ಯೋಗಿಯ ವಿವರಗಳನ್ನು ಪರಿಶೀಲಿಸಿ ಈ ವಿನಂತಿಯನ್ನು ಅನುಮೋದಿಸಬಹುದು.
ಈ ಪ್ರಕ್ರಿಯೆಗೆ ಬೇಕಾದ ದಾಖಲೆಗಳು
1. ಜನನ ಪ್ರಮಾಣ ಪತ್ರ
2. ಯಾವುದೇ ಶಾಲೆಯಿಂದ ಪಡೆದ ಪ್ರಮಾಣ ಪತ್ರ
3. ಕೇಂದ್ರ/ರಾಜ್ಯ ಸರ್ಕಾರದ ಸಂಸ್ಥೆಯಿಂದ ಸೇವಾ ದಾಖಲೆಗಳು
4. ಪಾಸ್‌ಪೋರ್ಟ್
5. ಸರ್ಕಾರಿ ಇಲಾಖೆ ವಿತರಿಸುವ ಯಾವುದೇ ಇತರ ವಿಶ್ವಾಸಾರ್ಹ ದಾಖಲೆ
6. ಸರ್ಕಾರಿ ಸರ್ಜನ್ ವಿತರಿಸಿದ ವೈದ್ಯಕೀಯ ಪ್ರಮಾಣ ಪತ್ರ, ಇದನ್ನು ಕೋರ್ಟ್‌ನಿಂದ ಪಡೆದ ಅಫಿಡವಿಟ್‌ನೊಂದಿಗೆ ಬೆಂಬಲಿಸಬೇಕು
7. ಆಧಾರ್/ ಇ-ಆಧಾರ್