ಹೊಸ ವಿತ್ತೀಯ ವರ್ಷದ ಆರಂಭಕ್ಕೂ ಮುನ್ನ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್ಓ) ಟ್ರಸ್ಟಿಗಳ ಕೇಂದ್ರ ಮಂಡಳಿ ಮಹತ್ವದ ವಿಚಾರವೊಂದರ ಬಗ್ಗೆ ಚರ್ಚಿಸಲು ಸಭೆ ಸೇರುವ ನಿರೀಕ್ಷೆ ಇದೆ. ಮಾರ್ಚ್ ಮೊದಲ ವಾರದಲ್ಲಿ ಗೌಹಾಟಿಯಲ್ಲಿ ಮಂಡಳಿ ಸದಸ್ಯರು ಸಭೆ ಸೇರಲಿದ್ದು, 2021-22ರ ವಿತ್ತೀಯ ವರ್ಷದ ಪಿಂಚಣಿ ನಿಧಿಗಳ ಮೇಲಿನ ಬಡ್ಡಿದರಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ.
2020-21ರ ವಿತ್ತೀಯ ವರ್ಷದಲ್ಲಿ ಪಿಎಫ್ ಠೇವಣಿಗಳ ಮೇಲೆ 8.5% ಬಡ್ಡಿ ದರ ಕಾಪಾಡಿಕೊಂಡಿದ್ದ ಸಂಸ್ಥೆಯು ಇದೇ ದರವನ್ನು ಹಿಂದಿನ ವರ್ಷದಲ್ಲೂ ಕಾಯ್ದುಕೊಂಡಿತ್ತು. ಇಪಿಎಫ್ಓ ಇಲ್ಲಿವರೆಗೂ ಮಾಡಿರುವ ಸಂಪಾದನೆಗಳ ಬಗ್ಗೆ ಸಭೆ ವೇಳೆ ಚರ್ಚಿಸಿ, ಇನ್ನಷ್ಟು ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಪಿಂಚಣಿ ನಿಧಿಯ ಮೇಲೆ ಬಡ್ಡಿದರವನ್ನು ಸೂಚಿಸಲಿದ್ದಾರೆ ಎನ್ನಲಾಗಿದೆ.
ದೀಪಾವಳಿಯಂದು ಯಾವ ಘಟನೆ ನಡೆದ್ರೆ ಮಂಗಳಕರ…?
ಈ ನಿಟ್ಟಿನಲ್ಲಿ ಆಡಿಟ್ ಸಮಿತಿಯು ತನ್ನ ಶಿಫಾರಸುಗಳನ್ನು ಸಿಬಿಟಿ ಸಭೆಗೂ ಒಂದು ದಿನ ಮುನ್ನ ಮಂಡಳಿ ಸದಸ್ಯರಿಗೆ ನೀಡಲಿದೆ ಎಂದು ಮೂಲಗಳು ತಿಳಿಸುತ್ತಿದೆ.
ಇಪಿಎಫ್ಓನ ಹೆಚ್ಚುವರಿ ಆದಾಯದ 5 ಪ್ರತಿಶತದಷ್ಟು ಮೊತ್ತವನ್ನು ಪರ್ಯಾಯ ಹೂಡಿಕೆ ನಿಧಿಗಳ (ಎಐಎಫ್) ಮೇಲೆ ಹೂಡಲು ಕೇಂದ್ರ ಸರ್ಕಾರ ಇಟ್ಟಿರುವ ಪ್ರಸ್ತಾವನೆ ಕುರಿತಂತೆ ಆರ್ಥಿಕ ಹೂಡಿಕೆ ಮತ್ತು ಆಡಿಟ್ ಸಮಿತಿ ಚರ್ಚೆ ನಡೆಸಲಿದೆ. ಮೂಲ ಸೌಕರ್ಯ ಹೂಡಿಕೆ ಟ್ರಸ್ಟ್ಗಳ ಮೇಲೆ ಹೂಡಿಕೆ ಮಾಡುವ ಸಂಬಂಧವೂ ಈ ವೇಳೆ ಮಾತುಕತೆ ನಡೆಯುವ ನಿರೀಕ್ಷೆ ಇದೆ.