ನಿಮ್ಮ ಇಪಿಎಫ್ಓ ಖಾತೆಯಲ್ಲಿ ತಪ್ಪುಗಳಿವೆಯೇ? ಅದನ್ನು ಸರಿಪಡಿಸಿಕೊಳ್ಳಲು ಅಥವಾ ಕೆಲ ಅಂಶಗಳನ್ನು ಸೇರಿಸಲು ಅಥವಾ ತೆಗೆದುಹಾಕಲು ಚಿಂತಿಸುತ್ತಿದ್ದೀರಾ? ಈ ಕೂಡಲೇ ನೀವು ಈ ಕೆಲಸ ಮಾಡಬಹುದು.
ಪಿಎಫ್ ಸದಸ್ಯರು ಈಗ ಆನ್‌ಲೈನ್‌ನಲ್ಲಿ ತಮ್ಮ ಡೇಟಾದಲ್ಲಿ ಬದಲಾವಣೆ ಅಥವಾ ತಿದ್ದುಪಡಿಯನ್ನು ಕೋರಬಹುದು ಮತ್ತು ಸಂಬಂಧಿತ ನಿಗದಿತ ದಾಖಲೆಗಳನ್ನು ಅಪ್‌ಲೋಡ್ ಮಾಡಬಹುದು ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಹೇಳಿದೆ.
PF ಸದಸ್ಯರಿಗೆ ಹೆಸರು, ಲಿಂಗ, ಹುಟ್ಟಿದ ದಿನಾಂಕ, ಪೋಷಕರ ಹೆಸರು, ವೈವಾಹಿಕ ಸ್ಥಿತಿ, ರಾಷ್ಟ್ರೀಯತೆ ಮತ್ತು ಆಧಾರ್ ಇತ್ಯಾದಿಗಳಂತಹ ಅನೇಕ ಅಂಶಗಳನ್ನು ಅವರ ಪ್ರೊಫೈಲ್ ನಲ್ಲಿ ನವೀಕರಿಸಲು / ಸರಿಪಡಿಸಲು EPFO ತನ್ನ ವೆಬ್‌ಸೈಟ್‌ನಲ್ಲಿ ಹೊಸ ಸಾಫ್ಟ್ ವೇರ್ ಕಾರ್ಯವನ್ನು ಕಾರ್ಯಗತಗೊಳಿಸಿದೆ.
“ಸದಸ್ಯರ ಪ್ರೊಫೈಲ್‌ನಲ್ಲಿರುವ ಡೇಟಾದ ಸಮಗ್ರತೆಯನ್ನು ಆಗಸ್ಟ್ 22, 2023 ರಂದು EPFO ಹೊರಡಿಸಿದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೆಸ್ (SOP) ಮೂಲಕ ಖಾತ್ರಿಪಡಿಸಲಾಗಿದೆ. ಇದು ಈಗ EPFO ನಿಂದ ಡಿಜಿಟಲ್ ಆನ್‌ಲೈನ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ” ಎಂದು ಸಂಸ್ಥೆ ಹೇಳಿದೆ.
ಈ ಹೊಸ ಸೌಲಭ್ಯವನ್ನು ಬಳಸಿಕೊಂಡು ಸದಸ್ಯರು ಈಗಾಗಲೇ ತಮ್ಮ ವಿನಂತಿಗಳನ್ನು ಸಲ್ಲಿಸಲು ಪ್ರಾರಂಭಿಸಿದ್ದಾರೆ ಅದರಲ್ಲಿ ಸುಮಾರು 40,000 ವಿನಂತಿಗಳಿಗೆ ಈಗಾಗಲೇ EPFO ನ ಕ್ಷೇತ್ರ ಕಚೇರಿಗಳಿಂದ ಅನುಮೋದನೆ ಸಿಕ್ಕಿದೆ.
ಉದ್ಯೋಗದಾತರಿಂದ ಸುಮಾರು 2.75 ಲಕ್ಷ ವಿನಂತಿಗಳನ್ನು ಸ್ವೀಕರಿಸಲಾಗಿದೆ. ಪರಿಶೀಲನೆಯ ನಂತರ ಅದನ್ನು ಅನುಮೋದನೆಗೆ ಶಿಫಾರಸು ಮಾಡಲಾಗುತ್ತದೆ ಎಂದು ಇಪಿಎಫ್‌ಒ ಹೇಳಿದೆ.
ಪ್ರಸ್ತುತ ಸುಮಾರು 7.5 ಕೋಟಿ ಸದಸ್ಯರು ಪ್ರತಿ ತಿಂಗಳು ಭವಿಷ್ಯ ನಿಧಿ, ಪಿಂಚಣಿ ಮತ್ತು ವಿಮಾ ಯೋಜನೆಗಳಿಗೆ ಸಕ್ರಿಯವಾಗಿ ಕೊಡುಗೆ ನೀಡುತ್ತಿದ್ದಾರೆ.
ಈ ಆರ್ಥಿಕ ವರ್ಷದ ಮೊದಲ ಎರಡು ತಿಂಗಳಲ್ಲಿ ಸುಮಾರು 87 ಲಕ್ಷ ಮನವಿಗಳು ಸಾಮಾಜಿಕ ಭದ್ರತೆಯ ಸೌಲಭ್ಯಗಳಾದ ವಸತಿಗಾಗಿ ಮುಂಗಡಗಳು, ಮಕ್ಕಳ ಮೆಟ್ರಿಕ್ಯುಲೇಟ್ ಶಿಕ್ಷಣ, ಮದುವೆ, ಅನಾರೋಗ್ಯ, ಅಂತಿಮ ಭವಿಷ್ಯ ನಿಧಿ ಇತ್ಯರ್ಥಗಳು, ಪಿಂಚಣಿ, ವಿಮೆ ಮುಂತಾದವುಗಳ ರೂಪದಲ್ಲಿ ಇತ್ಯರ್ಥಗೊಂಡಿವೆ ಎಂದು ಇಪಿಎಫ್‌ಒ ತಿಳಿಸಿದೆ.