ನವದೆಹಲಿ: ಪಿಎಫ್ ಕಂಪನಿಗಳ ಕೊಡುಗೆ ವಿಳಂಬಕ್ಕೆ ದಂಡ ಭರಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಬಿ.ವಿ. ನಾಗರತ್ನ ಅವರ ಪೀಠ, ಕಾರ್ಮಿಕರ ಭವಿಷ್ಯ ನಿಧಿಗೆ ಕಂಪನಿಗಳು ತಮ್ಮ ಪಾಲನ್ನು ನೀಡದೆ ಇದ್ದರೆ ಅಥವಾ ವಿಳಂಬ ಮಾಡಿದರೆ ದಂಡ ಪಾವತಿಸಬೇಕು ಎಂದು ಹೇಳಿದೆ.
ಕಂಪನಿಯು ಇಪಿಎಫ್ ನ ತನ್ನ ಪಾಲನ್ನು ವಿಳಂಬ ಮಾಡಲು ದುರುದ್ದೇಶ ಹೊಂದಿಲ್ಲದಿದ್ದರೂ ಕೂಡ ನಾಗರಿಕ ಹೊಣೆಗಾರಿಕೆ, ಜವಾಬ್ದಾರಿ ಉಲ್ಲಂಘನೆ ಕಾರಣಕ್ಕಾಗಿ ದಂಡ ಅಥವಾ ನಷ್ಟ ಭರಿಸಬೇಕು ಎಂದು ಹೇಳಲಾಗಿದೆ.
ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು, ಉದ್ಯೋಗಿಗಳ ಭವಿಷ್ಯನಿಧಿ ಮತ್ತು ಇತರೆ ನಿಬಂಧನೆಗಳ ಕಾಯ್ದೆ ಅನುಸರಿಸುವಲ್ಲಿ ವಿಫಲವಾಗಿದ್ದ ಕೊಡಗು ಜಿಲ್ಲೆ ಗೋಣಿಕೊಪ್ಪಲಿನ ತೋಟಗಾರಿಕೆ ಪ್ರಾಯೋಗಿಕ ಕೇಂದ್ರಕ್ಕೆ ನಷ್ಟ ಪರಿಹಾರ ನೀಡಲು ಆದೇಶಿಸಿ ತೀರ್ಪು ನೀಡಿದ್ದರು.
ಕರ್ನಾಟಕ ಹೈಕೋರ್ಟ್ ತೀರ್ಪು ಎತ್ತಿ ಹಿಡಿದಿತ್ತು. ಇದರ ವಿರುದ್ಧ ತೋಟಗಾರಿಕೆ ಕೇಂದ್ರ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು, ಈ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಪಿಎಫ್ ಗೆ ಕಂಪನಿಗಳ ಕೊಡುಗೆ ವಿಳಂಬಕ್ಕೆ ದಂಡ ಭರಿಸಬೇಕೆಂದು ಹೇಳಿದೆ.