ಕಾರ್ಮಿಕರ ಭವಿಷ್ಯ ನಿಧಿಯ ಸಾರ್ವತ್ರಿಕ ಖಾತೆ ಸಂಖ್ಯೆಗಳೊಂದಿಗೆ ಆಧಾರ್ ಲಿಂಕಿಂಗ್ ಮಾಡಲು ಇದ್ದ ಕೊನೆಯ ದಿನಾಂಕವನ್ನು ದೆಹಲಿ ಹೈಕೋರ್ಟ್ ವಿಸ್ತರಿಸಿದೆ.
ಹೊಸ ಡೆಡ್ಲೈನ್ ಪ್ರಕಾರ ನವೆಂಬರ್ 31, 2021ರ ಒಳಗೆ ಆಧಾರ್ ಲಿಂಕಿಂಗ್ ಹಾಗೂ ಖಾತ್ರಿ ಮಾಡಿಸಬೇಕಿದೆ. ಒಂದು ವೇಳೆ ಹೀಗೆ ಮಾಡದೇ ಇದ್ದರೆ ಉದ್ಯೋಗಿಯ ಖಾತೆಗೆ ಉದ್ಯೋಗದಾತರ ಕಡೆಯಿಂದ ಬರಬೇಕಾದ ಕೊಡುಗೆಯನ್ನು ಸೇರಿಸಲು ಆಗುವುದಿಲ್ಲ. ಜೊತೆಗೆ ಇಪಿಎಫ್‌ನ ಕೆಲವೊಂದು ಪ್ರಯೋಜನಗಳನ್ನೂ ಕಳೆದುಕೊಳ್ಳಬೇಕಾಗುತ್ತದೆ. ಕೋವಿಡ್-19 ಮುಂಗಡಗಳು, ವಿಮಾ ಪ್ರಯೋಜನಗಳು ಹಾಗೂ ಇನ್ನಿತರ ಪ್ರಯೋಜನಗಳು ಈ ಲಾಭಗಳಲ್ಲಿ ಸೇರಿವೆ.
ಡೆಡ್‌ಲೈನ್ ಇರುವವರೆಗೂ ಆಧಾರ್ ಲಿಂಕಿಂಗ್ ಮಾಡದ ನೌಕರರಿಗೂ ಸಹ ಉದ್ಯೋಗದಾತರು ಪ್ರಾವಿಡೆಂಟ್ ಪಾವತಿಗಳನ್ನು ಮಾಡಬಹುದಾಗಿದೆ ಎಂದು ನ್ಯಾಯಾಧೀಶೆ ಪ್ರತಿಭಾ ಎಂ ಸಿಂಗ್ ಆದೇಶಿಸಿದ್ದಾರೆ.
ಇವಿ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಲಿರುವ ಪಿಯಾಜಿಯೋ
ಅನೇಕ ಉದ್ಯಮಗಳು ಹಾಗು ಸ್ವಂತ ಕೈಗಾರಿಕೆಗಳು, ಕಾರ್ಖಾನೆಗಳು, ಸಂಸ್ಥೆಗಳು ಹಾಗೂ ವಾಣಿಜ್ಯ ಸಂಸ್ಥೆಗಳನ್ನು ನಡೆಸುವ ಮಂದಿ ಇಪಿಎಫ್‌ಓ ಆದೇಶದ ವಿರುದ್ಧ ಜೂನ್ 1, 2021ರಂದು ಕೋರ್ಟ್‌ನಲ್ಲಿ ದಾವೆ ಹೂಡಿದ್ದರು.
ಕಾರ್ಮಿಕರ ಭವಿಷ್ಯನಿಧಿ ಹಾಗೂ ಇತರೆ ಕಾನೂನುಗಳ ಕಾಯಿದೆ, 1952ರ ಅನ್ವಯ ಸಾರ್ವತ್ರಿಕ ಖಾತೆ ಸಂಖ್ಯೆಗೆ ಆಧಾರ್ ಲಿಂಕಿಂಗ್ ಕಡ್ಡಾಯ ಮಾಡಿ ಸುತ್ತೋಲೆಯನ್ನು ಹೊರಡಿಸಲಾಗಿದೆ. ಈ ಸಂಬಂಧ ಸೆಪ್ಟೆಂಬರ್ 1ರವರೆಗೂ ಕೇಂದ್ರ ಸರ್ಕಾರ ಡೆಡ್ಲೈನ್ ವಿಸ್ತರಿಸಿದೆ.
ಉದ್ಯೋಗಿಗಳ ನಿಖರವಾದ ಡೇಟಾ ಬ್ಯಾಂಕ್ ಸೃಷ್ಟಿಸುವ ಪ್ರಯತ್ನ ಇದಾಗಿದೆ.