ಉದ್ಯೋಗಿಗಳ ಹಣ ಉಳಿತಾಯಕ್ಕಾಗಿಯೇ ಇರುವ ಯೋಜನೆ ಪಿಎಫ್. ಸರ್ಕಾರ ನಡೆಸುವ ಯೋಜನೆಯಲ್ಲಿ ಇಪಿಎಫ್ ಕೂಡ ಒಂದು. ಪಿಎಫ್ ಖಾತೆಯಲ್ಲಿರುವ ಹಣಕ್ಕೆ ಬಡ್ಡಿ ಕೂಡ ಸಿಗುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ)ಯಿಂದ ಪ್ರಾವಿಡೆಂಟ್ ಫಂಡ್ (ಪಿಎಫ್) ಖಾತೆಗಳಿಗೆ ಬಡ್ಡಿ ನೀಡಲಾಗುತ್ತದೆ.
2021-22 ರ ಹಣಕಾಸು ವರ್ಷದಲ್ಲಿ PF ಖಾತೆಯಲ್ಲಿನ ಹೂಡಿಕೆಯ ಮೇಲಿನ ಬಡ್ಡಿ ದರವು ಶೇ.8.1 ರಷ್ಟಿದೆ. ಪ್ರತಿ ವರ್ಷ ಸಿಬಿಟಿ ಮೂಲಕ ಹಣಕಾಸು ಸಚಿವಾಲಯದೊಂದಿಗೆ ಸಮಾಲೋಚಿಸಿ ಪಿಎಫ್ನ ಬಡ್ಡಿ ದರವನ್ನು ನಿಗದಿಪಡಿಸಲಾಗುತ್ತದೆ. ಈ ವರ್ಷದ ಜೂನ್ನಲ್ಲಿ ಬಡ್ಡಿ ದರವನ್ನು ಪ್ರಕಟಿಸಲಾಗಿತ್ತು.
ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ ?
ಒಮ್ಮೆ ಬಡ್ಡಿಯನ್ನು ಕ್ರೆಡಿಟ್ ಮಾಡಿದ ನಂತರ ವ್ಯಕ್ತಿಯು ತನ್ನ PF ಖಾತೆಯಲ್ಲಿ ಬಡ್ಡಿಯ ಮೊತ್ತವನ್ನು ನೋಡಬಹುದು. ಇದುವರೆಗೆ ಅವರ ಖಾತೆಗೆ ಜಮೆಯಾಗಿರುವ ಮೊತ್ತವನ್ನೂ ಪರಿಶೀಲಿಸಬಹುದು. ಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಹಲವು ವಿಧಗಳಲ್ಲಿ ಪರಿಶೀಲಿಸಬಹುದು. ಪಿಎಫ್ ಖಾತೆಗಳಲ್ಲಿ ಠೇವಣಿ ಮಾಡಿದ ಮೊತ್ತವನ್ನು ಆನ್ಲೈನ್ ಅಥವಾ ಎಸ್ಎಂಎಸ್ ಮೂಲಕ ಪರಿಶೀಲಿಸಬಹುದು.
– ನೀವು ಎಸ್ಎಂಎಸ್ ಮೂಲಕ ಪಿಎಫ್ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತವನ್ನು ಪರಿಶೀಲಿಸಲು ಬಯಸಿದರೆ, EPFOHO UAN ENG ಎಂದು ಟೈಪ್ ಮಾಡಿ 7738299899ಗೆ SMS ಕಳುಹಿಸಬೇಕು.
– SMS ನಲ್ಲಿ ಬರೆದ ಕೊನೆಯ ಮೂರು ಅಕ್ಷರಗಳು ನಿಮ್ಮ ಆದ್ಯತೆಯ ಭಾಷೆಯನ್ನು ಸೂಚಿಸುತ್ತವೆ. ಇಲ್ಲಿ ENG ಎಂದರೆ ಇಂಗ್ಲೀಷ್. ನೀವು ಇಂಗ್ಲೀಷ್, ಕನ್ನಡ, ಹಿಂದಿ, ತಮಿಳು, ಮರಾಠಿ, ಬೆಂಗಾಲಿ, ಪಂಜಾಬಿ, ತೆಲುಗು, ಮಲಯಾಳಂ ಮತ್ತು ಗುಜರಾತಿ ಮುಂತಾದ ಒಟ್ಟು 10 ಭಾಷೆಗಳಿಂದ ಆಯ್ಕೆ ಮಾಡಬಹುದು.
-ಇದರಲ್ಲಿ ಹಿಂದಿಗೆ HIN, ಪಂಜಾಬಿಗೆ PUN, ಗುಜರಾತಿಗೆ GUJ, ಮರಾಠಿಗೆ MAR, ಕನ್ನಡಕ್ಕೆ KAN, ತೆಲುಗಿಗೆ TEL, ತಮಿಳಿಗೆ TAM, ಮಲಯಾಳಂಗೆ MAL ಮತ್ತು ಬೆಂಗಾಲಿಗೆ BEN ಎಂದು ಕಳುಹಿಸಬೇಕು.
-ಯುನಿವರ್ಸಲ್ ಅಕೌಂಟ್ ನಂಬರ್ (UAN) ನೊಂದಿಗೆ ನೋಂದಾಯಿಸಲಾದ ಅದೇ ಮೊಬೈಲ್ ಸಂಖ್ಯೆಯಿಂದ SMS ಕಳುಹಿಸಬೇಕು.
-EPFO ನಿಮ್ಮ ಕೊನೆಯ PF ಕೊಡುಗೆ, ಬ್ಯಾಲೆನ್ಸ್ ವಿವರಗಳು ಮತ್ತು KYC ವಿವರಗಳನ್ನು ನಿಮ್ಮ ಮೊಬೈಲ್ ಸಂಖ್ಯೆಗೆ SMS ಮೂಲಕ ಕಳುಹಿಸುತ್ತದೆ.