
ಒಲಿಂಪಿಕ್ ಪದಕ ವಿಜೇತರಾದ ನೀರಜ್ ಚೋಪ್ರಾ ಹಾಗೂ ಪಿ.ವಿ. ಸಿಂಧು ಹೆಸರಿರುವ ಮಂದಿಗೆ ಉಚಿತ ಇಂಧನ ನೀಡಲು ತಮಿಳು ನಾಡಿನ ಕರೂರ್ ಜಿಲ್ಲೆಯಲ್ಲಿರುವ ತಿರುಮಣಿಲಯೂರ್ ಎಂಬ ಊರಿನಲ್ಲಿರುವ ಪೆಟ್ರೋಲ್ ಪಂಪ್ ಒಂದು ನಿರ್ಧರಿಸಿದೆ.
ಬುಧವಾರದಿಂದ ಚಾಲ್ತಿಯಲ್ಲಿರುವ ಈ ಅಭಿಯಾನ ಶುಕ್ರವಾರದವರೆಗೂ ಇರಲಿದೆ ಎಂದು ಪೆಟ್ರೋಲ್ ಪಂಪ್ ಮಾಲೀಕ ಎ/ಆರ್. ಮಲಯಪ್ಪಸ್ವಾಮಿ ತಿಳಿಸಿದ್ದಾರೆ. ಮಾಲೀಕರು ಪಿಎಂಕೆ ಪಕ್ಷದಿಂದ ಶಾಸಕರಾಗಿದ್ದರು.
“ಅಷ್ಟೇನೂ ಸಿರಿವಂತ ಮನೆಯಲ್ಲಿ ಜನಿಸದ ನೀರಜ್ ಚೋಪ್ರಾ ಒಲಿಂಪಿಕ್ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರಿಗೆ ಸನ್ಮಾನಿಸುವ ಸಲುವಾಗಿ ನೀರಜ್ ಹೆಸರಿನ ಮಂದಿಗೆ ಎರಡು ಲೀಟರ್‌ನಷ್ಟು ಉಚಿತ ಪೆಟ್ರೋಲ್ ನೀಡಲು ನಿರ್ಧರಿಸಿದ್ದೇವೆ. ಇದುವರೆಗೂ ನೀರಜ್ ಹೆಸರಿನ ಕೇವಲ ಮೂರು ಮಂದಿ ಮಾತ್ರವೇ ನಮ್ಮ ಪಂಪ್‌ಗೆ ಬಂದಿದ್ದಾರೆ. ಏಕೆಂದರೆ ನೀರಜ್ ನಮ್ಮಲ್ಲಿ ಸಾಮಾನ್ಯವಾದ ಹೆಸರಲ್ಲ. ತಮಿಳು ನಾಡಿನಲ್ಲಿ ಸಿಂಧು ಬಹಳ ಸಾಮಾನ್ಯವಾಗಿ ಕೇಳಿ ಬರುವ ಹೆಸರು. ಆ ಹೆಸರಿನ ಒಂದಷ್ಟು ಜನರು ಬರುತ್ತಾರೆ ಎಂಬ ನಿರೀಕ್ಷೆಯಿದೆ,” ಎಂದು ಮಲಯಪ್ಪಸ್ವಾಮಿ ತಿಳಿಸಿದ್ದಾರೆ.,
BIG NEWS: ನಮಗೆ ಸಂಸತ್ ನಲ್ಲೂ ಅವಕಾಶವಿಲ್ಲ; ಟ್ವಿಟರ್ ನಲ್ಲೂ ಮಾತನಾಡಲು ಬಿಡಲ್ಲ; ರಾಜಕೀಯವನ್ನು ಕಂಪನಿಗಳು ನಿರ್ಧರಿಸುವುದನ್ನು ಒಪ್ಪಲ್ಲ; ಕಿಡಿಕಾರಿದ ರಾಹುಲ್ ಗಾಂಧಿ
ಈ ಆಫರ್ ಪಡೆಯಲು ಜನರು ತಮ್ಮ ಆಧಾರ್ ಕಾರ್ಡ್‌ಅನ್ನು ತೋರಿಸಬೇಕು ಎನ್ನುವ ಮಲಯಪ್ಪಸ್ವಾಮಿ, “ಸತ್ತ ಮೇಲೆ ನಾವು ಹೊತ್ತೊಯ್ಯುವುದಾದರೂ ಏನು? ಈ ರೀತಿಯ ಅಭಿಯಾನಗಳ ಮೂಲಕ ನಮ್ಮ ಯುವಕರ ಮೊಗದಲ್ಲಿ ಸ್ವಲ್ಪ ಸಂತಸ ತರೋಣ,” ಎಂದಿದ್ದಾರೆ.