ದೇಶಾದ್ಯಂತ ಇಂಧನ ಬೆಲೆಗಳು ಮೂರಂಕಿ ತಲುಪಿರುವ ನಡುವೆ ಜನರು ಇಲೆಕ್ಟ್ರಿಕ್ ವಾಹನಗಳು ಹಾಗೂ ಅಸಾಂಪ್ರದಾಯಿಕ ಇಂಧನದ ಮೇಲೆ ಚಲಿಸುವ ಇತರೆ ಆಯ್ಕೆಗಳ ಮೇಲೆ ಕಣ್ಣಾಡಿಸುತ್ತಿದ್ದಾರೆ.
ನಿಯಂತ್ರಣ ಮೀರಿ ಏರುತ್ತಿದ್ದ ಇಂಧನ ಬೆಲೆಗಳನ್ನು ದೀಪಾವಳಿ ಪ್ರಯುಕ್ತ ಕಡಿತ ಮಾಡಿದ ಕಾರಣ ಇಂದು ಲೀಟರ್ ಪೆಟ್ರೋಲ್ ಬೆಲೆ 100 ರೂ. ಆಸುಪಾಸಿನಲ್ಲಿದೆ. ಪೆಟ್ರೋಲ್‌ಗಿಂತ ಡೀಸೆಲ್ ಅಗ್ಗವೆಂದು ಭಾವಿಸುವ ಕಾಲ ಕಳೆದುಹೋಗಿದ್ದು, ಡೀಸೆಲ್ ಸಹ ನೂರು ರೂಪಾಯಿಯ ಸನಿಹದಲ್ಲೇ ಇದೆ. ಆದರೆ ಡೀಸೆಲ್ ಕಾರುಗಳು ಪೆಟ್ರೋಲ್ ಕಾರುಗಳ ಆರು ಪಟ್ಟು ಮಾಲಿನ್ಯಕಾರಕಗಳನ್ನು ಹೊರಸೂಸುತ್ತವೆ ಎಂದು ಅಂದಾಜಿದೆ. ಆದರೆ ಭಾರತದಂಥ ದೇಶಗಳಲ್ಲಿ ಇಂಧನ ಕ್ಷಮತೆಯೇ ಎಲ್ಲಕ್ಕಿಂತ ಮೊದಲು ಬರುವ ಕಾರಣ ಪರಿಸರ ಕಾಳಜಿಯ ಲೆಕ್ಕಾಚಾರಗಳೆಲ್ಲಾ ಕೆಲಸ ಮಾಡೋದಿಲ್ಲ.
5000 ಮಹಿಳೆಯರೊಂದಿಗಿನ ಲೈಂಗಿಕ ಸಂಪರ್ಕದ ಮಾಹಿತಿಯನ್ನು ಸ್ಪ್ರೆಡ್ ಶೀಟ್‌ನಲ್ಲಿ ದಾಖಲಿಸಿಟ್ಟಿದ್ದ ಐಟಿ ದಿಗ್ಗಜ…!
ಇಂಥ ಪ್ರಕರಣಗಳಲ್ಲಿ, ನೈಸರ್ಗಿಕ ಅನಿಲ (ಸಿಎನ್‌ಜಿ) ಚಾಲಿತ ವಾಹನಗಳು ಉತ್ತಮ ಆಯ್ಕೆ ಎನಿಸುತ್ತವೆ. ಈ ವಾಹನಗಳು ಭಾರತದ ರಸ್ತೆಗಳ ಮೇಲೆ ಓಡಾಡಲು ಆರಂಭಗೊಂಡು ದಶಕವೇ ಕಳೆದಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಿನೇ ದಿನೇ ಏರಿಕೆಯಾಗುತ್ತಿರುವ ಇಂದಿನ ಕಾಲಮಾನದಲ್ಲಿ ಸಿಎನ್‌ಜಿ ಚಾಲಿತ ವಾಹನಗಳು ಉತ್ತಮ ಆಯ್ಕೆ ಎನಿಸುತ್ತವೆ.
ಪೆಟ್ರೋಲ್ ಹಾಗೂ ಡೀಸೆಲ್ ಚಾಲಿತ ಕಾರುಗಳಲ್ಲಿ ಸಿಎನ್‌ಜಿ ಚಾಲಿತ ಕಾರುಗಳಿಗಿಂತ ಹೆಚ್ಚಿನ ಜಾಗ, ಆಯ್ಕೆಗಳು ಸೇರಿದಂತೆ ಅನೇಕ ಅನುಕೂಲಗಳಿದ್ದರೂ ಸಹ ಸಿಎನ್‌ಜಿ ಚಾಲಿತ ಕಾರುಗಳಲ್ಲೂ ಸಹ ತಮ್ಮದೇ ಆದ ಅನುಕೂಲಗಳಿವೆ.
ಡೀಸೆಲ್ ಚಾಲಿತ ವಾಹನಗಳ ಮೇಲೆ ಸಿಎನ್‌ಜಿ ಕಾರುಗಳಿಗಿರುವ ಅನುಕೂಲಗಳ ಕಿರುಪಟ್ಟಿ ಇಂತಿದೆ:
ಸರ್ವೀಸ್ ಹಾಗೂ ನಿರ್ವಹಣೆ: ಸಿಎನ್‌ಜಿ ಕಾರುಗಳು ಸರ್ವೀಸ್ ಹಾಗೂ ನಿರ್ವಹಣೆ ವಿಚಾರದಲ್ಲಿ ಡೀಸೆಲ್ ಕಾರುಗಳಿಗಿಂತ ಅಗ್ಗದ ಆಯ್ಕೆಗಳಾಗಿವೆ.
ಪರಿಸರ ಸ್ನೇಹಿ: ಡೀಸೆಲ್ ಚಾಲಿತ ಕಾರುಗಳಿಗಿಂತ ಸಿಎನ್‌ಜಿ ಕಾರುಗಳು ಪರಿಸರ ಸ್ನೇಹಿ ಆಯ್ಕೆಗಳಾಗಿವೆ. ಸಿಎನ್‌ಜಿ ಕಾರುಗಳಲ್ಲಿ ಹೊಗೆ ಸೂಸುವಿಕೆ ಅತ್ಯಂತ ಕಡಿಮೆ ಇದ್ದು, ಅದಾಗಲೇ ಮಾಲಿನ್ಯಭರಿತವಾಗಿರುವ ನಗರ ಪ್ರದೇಶಗಳಲ್ಲಿ ಸೂಕ್ತವಾದ ಆಯ್ಕೆಯಾಗುತ್ತವೆ.
ವೆಚ್ಚ ಹಿಂದಿರುಗುವಿಕೆ: ಸಿಎನ್‌ಜಿ ವಾಹನಗಳು ಡೀಸೆಲ್ ವಾಹನಗಳಿಗಿಂತ ದುಬಾರಿ ಎಂದು ಅನೇಕ ಮಂದಿ ಭಾವಿಸಿದ್ದಾರೆ. ಆದರೆ ವಾಸ್ತವದಲ್ಲಿ, ಸಿಎನ್‌ಜಿ ವಾಹನದ ಇಂಜಿನ್ ಮೇಲೆ ತಗುಲುವ ಹೆಚ್ಚುವರಿ ವೆಚ್ಚವು ಡೀಸೆಲ್ ಇಂಜಿನ್‌ಗಿಂತ ಕಡಿಮೆ ಇದೆ. ಇದರರ್ಥ, ಸಿಎನ್‌ಜಿ ಇಂಜಿನ್ ಮೇಲೆ ಮಾಡಿದ ಹೂಡಿಕೆಯನ್ನು ತ್ವರಿತವಾಗಿ ಮರಳಿ ಪಡೆಯಬಹುದು.
ಜೀವಿತಾವಧಿ: ಸಿಎನ್‌ಜಿ ವಾಹನಗಳು ಸಾಮಾನ್ಯವಾಗಿ 10-12 ವರ್ಷಗಳ ಕಾಲ ಬಾಳಿಕೆ ಬರುತ್ತವೆ. ಡೀಸೆಲ್ ವಾಹನಗಳ ಬಾಳಿಕೆಯ ಸರಾಸರಿ 6-8 ವರ್ಷಗಳ ಕಾಲ ಬಾಳಿಕ ಬರುತ್ತವೆ.
ಇಂಧನ ಬೆಲೆ ಅಗ್ಗ: ಡೀಸೆಲ್ ಬೆಲೆಗಿಂತ ಸಿಎನ್‌ಜಿ ಬೆಲೆಯು 30-50%ನಷ್ಟು ಅಗ್ಗವಾಗಿದೆ. ಇಂಧನ ಕ್ಷಮೆತೆಯೂ ಉತ್ತಮವಾಗಿರುವ ಕಾರಣ ಸಿಎನ್‌ಜಿ ವಾಹನಗಳ ಇಂಧನದ ಸರಾಸರಿ ವೆಚ್ಚ ಕಡಿಮೆಯೇ ಇರುತ್ತದೆ.
ಕಡಿಮೆ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ: ಸಿಎನ್‌ಜಿ ವಾಹನಗಳು ಡೀಸೆಲ್ ಅಥವಾ ಪೆಟ್ರೋಲ್‌ಗಳ ಮೇಲೆ ಚಲಿಸುವ ವಾಹನಗಳಿಗೆ ಹೋಲಿಸಿದಲ್ಲಿ ಇಂಗಾಲದ ಡೈ ಆಕ್ಸೈಡ್‌ಅನ್ನು 30%ಕಷ್ಟು ಕಡಿಮೆ ಹೊರ ಸೂಸುತ್ತವೆ.
ಸಿಎನ್‌ಜಿ ಲಭ್ಯತೆ: ಪಳೆಯುಳಿಕೆ ಇಂಧನಗಳಾದ ಪೆಟ್ರೋಲ್ ಹಾಗೂ ಡೀಸೆಲ್‌ಗಳಿಗೆ ಹೋಲಿಸಿದಲ್ಲಿ ಭೂಮಿ ಮೇಲೆ ಸ್ವಾಭಾವಿಕ ಅನಿಲ ಹೇರಳವಾಗಿ ಲಭ್ಯವಿದೆ.
ಸುಸ್ಥಿರತೆ: ಜೈವಿಕ ತ್ಯಾಜ್ಯದಿಂದ ಸಿಎನ್‌ಜಿಯ ಪ್ರಮುಖ ಅಂಶವಾದ ಮೀಥೇನ್ ಸೃಷ್ಟಿಸುವುದು ಸಾಧ್ಯವಿರುವ ಕಾರಣ ಈ ಆಕಾರದ ಇಂಧನ ಹೆಚ್ಚು ಸುಸ್ಥಿರವಾಗಿದೆ.
ಸುರಕ್ಷತೆ: ಸಿಎನ್‌ಜಿ ಸಿಲಿಂಡರ್‌ಗಳನ್ನು ಬಹಳ ಕಟ್ಟುನಿಟ್ಟಾದ ಸುರಕ್ಷತಾ ಪರೀಕ್ಷೆಗಳಿಗೆ ಒಳಪಡಿಸುವುದಲ್ಲದೇ ಇವುಗಳ ಸಿಲಿಂಡರ್‌ಗಳನ್ನು ಕಾರ್ಬನ್ ಫೈಬರ್ ಪ್ಲಾಸ್ಟಿಕ್ (ಸಿಆರ್‌ಎಫ್‌ಪಿ) ಬಳಸಿ ತಯಾರಿಸಿರುವ ಕಾರಣ ಇವುಗಳ ಬಳಕೆ ಬಹಳ ಸುರಕ್ಷಿತವಾಗಿದೆ.