ನ್ಯೂಯಾರ್ಕ್: ಗ್ಯಾಸ್ ಸ್ಟೇಷನ್‌ಗಳಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಇಲ್ಲಿ ಮಾಡಬಾರದಂತಹ ಹಲವು ವಿಷಯಗಳಿವೆ. ಇಂಥ ಅಪಾಯಕಾರಿ ಜಾಗದಲ್ಲಿ ಸ್ಟಂಟ್ ಮಾಡುವುದು ಜೀವಕ್ಕೆ ಕುತ್ತು ತಂದುಕೊಂಡಂತೆ. ಅಂಥದ್ದೊಂದು ಸ್ಟಂಟ್ ಮಾಡಲು ಹೋದ ಯುವಕನ ವಿಡಿಯೋ ಒಂದು ವೈರಲ್ ಆಗಿದ್ದು, ಭೀತಿ ಹುಟ್ಟಿಸುವಂತಿದೆ.
ಸುಮಾರು 18 ವರ್ಷದ ಯುವಕ ಗ್ಯಾಸ್ ಸ್ಟೇಷನ್ನಲ್ಲಿ ಕಾರು ಸ್ಟಂಟ್ ಮಾಡಲು ಹೋಗಿ ಭಯಾನಕ ವಾತಾವರಣ ಸೃಷ್ಟಿಸಿದ್ದಾನೆ. ಆತನ ಕಾರು ಬೆಂಕಿಗೆ ಆಹುತಿಯಾಗಿರುವ ವಿಡಿಯೋ ವೈರಲ್ ಆಗಿದೆ.
ಈ ಘಟನೆ ನಡೆದಿರುವುದು ನ್ಯೂಯಾರ್ಕ್‌ನ ನಿಲ್ದಾಣದಲ್ಲಿ. ಡಿಸೆಂಬರ್ 4 ರಂದು ರೋಚೆಸ್ಟರ್ ಗ್ಯಾಸ್ ಸ್ಟೇಷನ್ ಪಂಪ್‌ನಲ್ಲಿ ಈ ಘಟನೆ ಸಂಭವಿಸಿದ್ದು ಇದೀಗ ವೈರಲ್ ಆಗಿದೆ.
ಇಂಥದ್ದೊಂದು ಘಟನೆಗೆ ಕಾರಣನಾದವನನ್ನು ರಿಯಾನ್ ಓಡೆಲ್ ಎಂದು ಗುರುತಿಸಲಾಗಿದೆ. ಅದೃಷ್ಟವಶಾತ್ ಅವನ ಪ್ರಾಣಕ್ಕೆ ಹಾನಿಯಾಗಲಿಲ್ಲ. ಆದರೆ ಆತ ಸ್ಟಂಟ್ ಮಾಡಲು ಹೋಗಿದ್ದು, ನಂತರ ಅಲ್ಲಿಂದ ಪಲಾಯನ ಮಾಡಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಯುವಕನನ್ನು ಬಂಧಿಸಲಾಗಿದೆ.