
ನವದೆಹಲಿ : ರಾಮಮಂದಿರ ಉದ್ಘಾಟನೆ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ 5 ರಿಂದ 10 ರೂ.ವರೆಗೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ತೈಲ ಮಾರಾಟ ಕಂಪನಿಗಳಿಗೆ ಮೂರನೇ ತ್ರೈಮಾಸಿಕದ ವರದಿ ಬಿಡುಗಡೆಯಾಗಲಿದ್ದು, ತೈಲ ಕಂಪನಿಗಳಿಗೆ 75 ಸಾವಿರ ಕೋಟಿ ರೂ. ಲಾಭವಾಗುವ ಸಾಧ್ಯತೆ ಹಿನ್ನಲೆಯಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ 5 ರಿಂದ 10 ರೂ.ವರೆಗೆ ಇಳಿಕೆಯಾಗುವ ಸಾಧ್ಯತೆ ಎನ್ನಲಾಗಿದೆ.
ಮೂರು ಪ್ರಮುಖ ತೈಲ ಕಂಪನಿಗಳು ಒಂದು ಮತ್ತು ಎರಡನೇ ತ್ರೈಮಾಸಿಕದಲ್ಲಿ ಗಣನೀಯ ನಿವ್ವಳ ಲಾಭ ಗಳಿಸಿದ್ದು, ಇದೇ ಪ್ರಗತಿ ಮೂರನೇ ತ್ರೈಮಾಸಿಕದಲ್ಲೂ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.