ನವದೆಹಲಿ: ಭಾನುವಾರ ಪೆಟ್ರೋಲ್ ಬೆಲೆಯಲ್ಲಿ 50 ಪೈಸೆ ಮತ್ತು ಡೀಸೆಲ್ ಮೇಲೆ 55 ಪೈಸೆ ಹೆಚ್ಚಳದೊಂದಿಗೆ ಐದು ದಿನಗಳಲ್ಲಿ ಲೀಟರ್ ಗೆ 3.70 ರೂ.ನಷ್ಟು ಏರಿಕೆಯಾಗಿದೆ.
ಇತ್ತೀಚಿನ ಬೆಲೆ ಪರಿಷ್ಕರಣೆ ನಂತರ, ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 99.11 ರೂ.ಮತ್ತು ಡೀಸೆಲ್ ಲೀಟರ್ ಗೆ 90.42 ರೂ. ಮಾರಾಟವಾಗಲಿದೆ.
ಮುಂಬೈನಲ್ಲಿ 53 ಪೈಸೆ ಹೆಚ್ಚಳದ ನಂತರ ಪೆಟ್ರೋಲ್ ಬೆಲೆ 113.88 ರೂ.ಆಗಲಿದ್ದು, 58 ಪೈಸೆ ಏರಿಕೆಯಾದ ನಂತರ ಡೀಸೆಲ್ 98.13 ರೂ.ಗೆ ಮಾರಾಟವಾಗಲಿದೆ.
ದೇಶಾದ್ಯಂತ ದರಗಳನ್ನು ಹೆಚ್ಚಿಸಲಾಗಿದೆ ಮತ್ತು ಸ್ಥಳೀಯ ತೆರಿಗೆ ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ದರ ಬದಲಾಗುತ್ತದೆ.