ಶಿಲ್ಲಾಂಗ್: ಮಾಜಿ ಉಗ್ರನೊಬ್ಬನನ್ನು ಪೊಲೀಸರು ಗುಂಡಿಕ್ಕಿ ಹತ್ಯೆಗೈದ ಹಿನ್ನೆಲೆಯಲ್ಲಿ ಮೇಘಾಲಯದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದು ಅಲ್ಲಿನ ಸಿಎಂ ನಿವಾಸದ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ.
ಭಾನುವಾರ ರಾತ್ರಿ ಘಟನೆ ಜರುಗಿದ್ದು, ಒಂದು ಬಾಂಬನ್ನು ಸಿಎಂ ನಿವಾಸದ ಎದುರು ಮತ್ತೊಂದನ್ನು ನಿವಾಸದ ಹಿಂಬದಿಯಲ್ಲಿ ಎಸೆಯಲಾಗಿದೆ.
ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ರಾಜಧಾನಿಯ ಸುತ್ತಲಿನ ನಾಲ್ಕು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಮೊಬೈಲ್ ಹಾಗೂ ಇಂಟರ್ನೆಟ್ ಸೇವೆಯನ್ನು ಪೊಲೀಸರು ಸ್ಥಗಿತಗೊಳಿಸಿದ್ದಾರೆ. ಈ ನಡುವೆ ಮೇಘಾಲಯದ ಗೃಹ ಸಚಿವ ಲಾಕ್ ಮೆನ್ ರೈಂಬುಯಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
ಇದು ಕಾಂಗ್ರೆಸ್ ನವರ ಕೊನೇ ಕ್ಷಣಗಳು: ಮಾಜಿ ಸಚಿವ ಜಗದೀಶ್ ಶೆಟ್ಟರ್ ಎಚ್ಚರಿಕೆ
ನಗರದಲ್ಲಿನ ಹಿಂಸಾಚಾರ ಕುರಿತು ನ್ಯಾಯಾಂಗ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ. ಕೆಲ ದಿನಗಳ ಮುನ್ನ ಪೊಲೀಸರ ದಾಳಿಯಲ್ಲಿ
ನಿಷೇಧಿತ ಹೆಚ್ಎನ್ಎಲ್ಸಿ ಸಂಘಟನೆಯ ಮಾಜಿ ನಾಯಕ ಚೆಸ್ಟರ್ಫೀಲ್ಡ್ ಥಾಂಕಿಯು ಅವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ಪೊಲೀಸರ ಮೇಲೆ ಚಾಕುವಿನಿಂದ ದಾಳಿ ನಡೆಸಿದ ಚೆಸ್ಟರ್ಫೀಲ್ಡ್ ಗೆ ಗುಂಡು ಹಾರಿಸಲಾಗಿತ್ತು.