ಚೆನ್ನೈ: ತಮಿಳುನಾಡು ರಾಜಭವನದ ಮುಖ್ಯ ದ್ವಾರದ ಬಳಿ ಬುಧವಾರ ಮಧ್ಯಾಹ್ನ ರೌಡಿಯೊಬ್ಬ ಸ್ಫೋಟಕ ವಸ್ತುವನ್ನು ಎಸೆದಿದ್ದಾನೆ.
ಕರ್ತವ್ಯದಲ್ಲಿದ್ದ ಪೊಲೀಸರು ಆತನನ್ನು ಬಂಧಿಸಿದ್ದಾರೆ.. ಆರೋಪಿಯನ್ನು ‘ಕರುಕ್ಕ’ ವಿನೋದ್ ಎಂದು ಗುರುತಿಸಲಾಗಿದ್ದು, ತಕ್ಷಣ ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇಂದು ರಾಜಭವನದ ಮೇಲೆ ಪೆಟ್ರೋಲ್ ಬಾಂಬ್ಗಳನ್ನು ಎಸೆಯಲಾಗಿದೆ, ಇದು ತಮಿಳುನಾಡಿನ ನಿಜವಾದ ಕಾನೂನು ಮತ್ತು ಸುವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ. ಆಸಕ್ತಿಯ ಕ್ಷುಲ್ಲಕ ವಿಷಯಗಳತ್ತ ಜನರ ಗಮನವನ್ನು ಬೇರೆಡೆಗೆ ಸೆಳೆಯುವಲ್ಲಿ ಡಿಎಂಕೆ ನಿರತವಾಗಿದ್ದರೆ, ಅಪರಾಧಿಗಳು ಬೀದಿಗಿಳಿದಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.