ಮದುವೆ ಸಮಾರಂಭಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪೇಟಾ ಇಂಡಿಯಾ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮುಂದಾಗಿದೆ. ಮದುವೆ ಸಮಾರಂಭಗಳಲ್ಲಿ ಕುದುರೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂಬ ಕಾರಣಕ್ಕೆ ಅವುಗಳಿಗೆ ನೋವುಂಟು ಮಾಡುವ ಲಗಾಮುಗಳನ್ನು ಬಳಸದಂತೆ ಜಾಗೃತಿ ಮೂಡಿಸುತ್ತಿದೆ.
ನಿಮ್ಮ ಸಂಭ್ರಮವು ಹಾಳಾಗಬಾರದೆಂದು ಕುದುರೆಗಳಿಗೆ ನೋವುಂಟು ಮಾಡಬೇಡಿ ಎಂಬ ಸಂದೇಶವನ್ನು ಸಾರುವ ಫಲಕಗಳನ್ನು ಲಕ್ನೋ, ಚಂಡೀಗಢ, ದೆಹಲಿ, ಜೈಪುರ ಹಾಗೂ ಮುಂಬೈನಲ್ಲಿ ಅಳವಡಿಸಿದೆ.
ಕೆಲ ದಿನಗಳ ಹಿಂದಷ್ಟೇ ನಟ ಹಾಗೂ ವಿದೂಷಕ ರಾಜು ಶ್ರೀವಾತ್ಸವ ಮದುವೆ ಹಾಗೂ ವಿವಿಧ ಸಮಾರಂಭಗಳಲ್ಲಿ ಕುದುರೆಗಳು ಅನುಭವಿಸುವ ಯಾತನೆಯ ಬಗ್ಗೆ ವಿಡಿಯೋ ಶೇರ್ ಮಾಡಿದ್ದರು.
ಪೇಟಾ ಇಂಡಿಯಾದ ಹಿರಿಯ ಅಭಿಯಾನ ಆಯೋಜಕಿ ರಾಧಿಕಾ ಸೂರ್ಯವಂಶಿ ಈ ವಿಚಾರವಾಗಿ ಮಾತಾಡಿದ್ದು, ಲಗಾಮು ಒಂದು ಹಿಂಸೆ ನೀಡುವಂತಹ ಸಾಧನವಾಗಿದ್ದು ಇದರಿಂದ ಕುದುರೆಯು ಜೀವನ ಪರ್ಯಂತ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಹೀಗಾಗಿ ನವ ಜೋಡಿಗಳು ದಯಮಾಡಿ ಕುದುರೆಗಳ ಮೇಲೆ ಕನಿಕರ ತೋರಬೇಕು ಹಾಗೂ ನಿಮ್ಮ ಮದುವೆ ಪ್ಲಾನ್ನಲ್ಲಿ ಕುದುರೆಯನ್ನು ಸೇರಿಸಬೇಡಿ ಎಂದು ವಿನಂತಿಸಿದ್ದಾರೆ.