ಈ ಗಿಳಿಯನ್ನು ಹುಡುಕಿಕೊಟ್ಟವರಿಗೆ ಬಹುಮಾನ ಸಿಗಲಿದೆ. ಗಯಾದಲ್ಲಿನ ಕುಟುಂಬವೊಂದು ತನ್ನ ಮುದ್ದಿನ ಗಿಳಿ ಕಾಣೆಯಾಗಿರುವ ಬಗ್ಗೆ ನಗರದೆಲ್ಲೆಡೆ ಪೋಸ್ಟರ್ ಗಳನ್ನು ಅಂಟಿಸಿ, ಗಿಳಿ ಹುಡುಕಿಕೊಟ್ಟವರಿಗೆ 5,100 ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.
ಪಿಪರ್ಪತಿ ರಸ್ತೆಯ ನಿವಾಸಿಗಳಾಗಿರುವ ಶ್ಯಾಂ ದೇವ್ ಪ್ರಸಾದ್ ಗುಪ್ತಾ ಮತ್ತು ಪತ್ನಿ ಸಂಗೀತಾ ಗುಪ್ತಾ ಅವರು 12 ವರ್ಷಗಳಿಂದ ಗಿಳಿಯನ್ನು ತುಂಬಾ ಪ್ರೀತಿಯಿಂದ ಸಾಕಿದ್ದರು. ಇದು ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿತ್ತು.
ಆದರೆ, ಕಳೆದ ಒಂದು ತಿಂಗಳ ಹಿಂದೆ ಹೊರಗೆ ಹಾರಿ ಹೋದ ಗಿಳಿಯು ವಾಪಸ್ ಬರಲೇ ಇಲ್ಲ. ಹಲವು ಬಾರಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ತಮ್ಮ ಮುದ್ದಿನ ಗಿಳಿ ಕಾಣೆಯಾಗಿದ್ದು, ಅದನ್ನು ಹುಡುಕಿಕೊಟ್ಟವರಿಗೆ 5,100 ರೂಪಾಯಿ ಬಹುಮಾನವನ್ನು ನೀಡುವುದಾಗಿ ಪ್ರಕಟಿಸಿದ್ದಾರೆ.
BIG NEWS: ಪಿಎಸ್‌ಐ ಅಕ್ರಮ; ಕಿಂಗ್ ಪಿನ್ ಟಚ್ ಮಾಡಿದ್ರೆ ಸರ್ಕಾರ ಉಳಿಯುತ್ತಾ ? ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ 80 ಲಕ್ಷ ಫಿಕ್ಸ್; ಹೊಸ ಬಾಂಬ್ ಸಿಡಿಸಿದ HDK
ಕೇವಲ ಪೋಸ್ಟರ್ ಗಳನ್ನು ಅಂಟಿಸಿರುವುದಷ್ಟೇ ಅಲ್ಲ, ಫೇಸ್ ಬುಕ್ ಪೋಸ್ಟ್ ಗಳು ಮತ್ತು ವಾಟ್ಸಪ್ ಸಂದೇಶಗಳ ಮೂಲಕ ಕುಟುಂಬದವರು ತಮ್ಮ ಗಿಳಿಯನ್ನು ಹುಡುಕಿಕೊಡುವಂತೆ ಮನವಿ ಮಾಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀಮತಿ ಗುಪ್ತಾ ಅವರು, 12 ವರ್ಷದಿಂದ `ಪೊಪೊ’ ಎಂಬ ಹೆಸರಿನ ಗಿಳಿಯನ್ನು ಸಾಕಿದ್ದೆವು. ಅಚಾನಕ್ಕಾಗಿ ಏಪ್ರಿಲ್ 5 ರಂದು ಹೊರಗೆ ಹಾರಿ ಹೋದ ಆ ಗಿಳಿ ಇನ್ನೂ ಮನೆಗೆ ವಾಪಸಾಗಿಲ್ಲ. ಒಂದು ವೇಳೆ ನಮ್ಮ ಗಿಳಿಯನ್ನು ಯಾರಾದರೂ ಕೊಂಡೊಯ್ದಿದ್ದರೆ ದಯಮಾಡಿ ನಮಗೆ ವಾಪಸ್ ನೀಡಿ. ಇದಕ್ಕೆ ಪ್ರತಿಯಾಗಿ ನಿಮಗೆ ಹೊಸದಾಗಿ ಮೂರು ಗಿಳಿಗಳನ್ನು ಖರೀದಿ ಮಾಡಿ ಕೊಡುತ್ತೇವೆ ಎಂದು ಮನವಿ ಮಾಡಿದ್ದಾರೆ.