alex Certify ಶ್ವಾನದ ಜೊತೆ ಟ್ರೆಕ್ಕಿಂಗ್ ಬಂದ ಮಹಿಳೆ ಮಾಡಿದ ಕೆಲಸ ಕಂಡು ಶಾಕ್​ ಆಗ್ತೀರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನದ ಜೊತೆ ಟ್ರೆಕ್ಕಿಂಗ್ ಬಂದ ಮಹಿಳೆ ಮಾಡಿದ ಕೆಲಸ ಕಂಡು ಶಾಕ್​ ಆಗ್ತೀರಾ..!

ನೀವು ತುಂಬಾ ಲಗೇಜ್​ ಹೊಂದಿದ್ದರೆ ಅಥವಾ ನಿಮ್ಮ ಸ್ನೇಹಿತರ ಗುಂಪು ಸೋಂಬೇರಿಗಳಾಗಿದ್ದರೆ ಟ್ರೆಕ್ಕಿಂಗ್​ ಮಾಡೋದು ನಿಜಕ್ಕೂ ಕಷ್ಟವೆ ಆಗಬಹುದು. ಆದರೆ ಇಲ್ಲೊಬ್ಬ ಮಹಿಳೆಯು ತನ್ನ ಸಾಕು ನಾಯಿಯನ್ನು ಟ್ರೆಕ್ಕಿಂಗ್​​ ಕರೆದುಕೊಂಡು ಬಂದು ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾಳೆ.

ಸ್ಯಾಂಕ್ಟಿಂಗ್​ ಪರ್ವತವನ್ನು ಏರಲು ನಿರ್ಧರಿಸಿದ ಚೀನಾದ ಮಹಿಳೆಯು 40 ಕಿಲೋಮೀಟರ್​ ದೂರ ತನ್ನ ನಾಯಿಯನ್ನು ಸಾಗಿಸಲು ಇಬ್ಬರು ವ್ಯಕ್ತಿಯನ್ನು ನೇಮಿಸಿದ್ದಳು. ಪರ್ವತದ ತುತ್ತ ತುದಿಯನ್ನು ತಲುಪುವವವರೆಗೆ ಆಕೆ ಶ್ವಾನಕ್ಕಾಗಿ 11 ಸಾವಿರ ರೂಪಾಯಿ ಖರ್ಚು ಮಾಡಿದ್ದಾಳೆ ಎನ್ನಲಾಗಿದೆ.

ಮಹಿಳೆಯು ಚೀನಾದ ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟಿದ್ದಾಳೆ. ಈ ಮೂಲಕ ಈ ಘಟನೆ ಬಗ್ಗೆ ನೆಟ್ಟಿಗರ ಜೊತೆ ಮಾಹಿತಿ ಶೇರ್​ ಮಾಡಿದ್ದಾರೆ. ತನ್ನ ಪ್ರೀತಿಯ ಸಾಕು ಪ್ರಾಣಿಯನ್ನು ಮಗುವಿನಂತೆ ಪರ್ವತದ ತುತ್ತ ತುದಿಗೆ ತಲುಪಿಸುವವರೆಗೆ ತಾನು ಎಷ್ಟು ದೊಡ್ಡ ಮೊತ್ತವನ್ನು ಪಾವತಿಸಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ದೃಶ್ಯಾವಳಿಗಳಲ್ಲಿ ಇಬ್ಬರು ವ್ಯಕ್ತಿಗಳು ಆರಾಮ ಕುರ್ಚಿಯ ಮೇಲೆ ಶ್ವಾನವನ್ನು ಹೊತ್ತುಕೊಂಡು ಸಾಗುತ್ತಿರೋದನ್ನ ಕಾಣಬಹುದಾಗಿದೆ. ಈಕೆ ಎರಡು ನಾಯಿಯನ್ನು ಹೊಂದಿದ್ದಳು. ಇದರಲ್ಲಿ ಒಂದು ಶ್ವಾನ ನಡೆಯಲು ಇಚ್ಛಿಸುತ್ತಿರಲಿಲ್ಲ ಹಾಗೂ ಐಷಾರಾಮಿ ಸೇವೆಯನ್ನೇ ಬಯಸುತ್ತಿತ್ತು ಎನ್ನಲಾಗಿದೆ.

ಈ ಸೇವೆಗಳು ಮನುಷ್ಯರಿಗೆ ಮೀಸಲಾಗಿದ್ದರೂ ಸಹ ಮಹಿಳೆಯು ತನ್ನ ಶ್ವಾನಕ್ಕೆ ಈ ಸೇವೆಯನ್ನು ಬಳಕೆ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ವೈರಲ್​ ಆಗ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...