ರಸ್ತೆಗಳಲ್ಲಿ ನಾಯಿಗಳು, ಬೆಕ್ಕುಗಳು, ಹಾವುಗಳು, ಹೆಗ್ಗಣಗಳು ಸುತ್ತಾಡುವುದು ಸರ್ವೇ ಸಾಮಾನ್ಯವಾಗಿ ಕಂಡುಬರುವ ದೃಶ್ಯ. ಆದರೆ, ಸಾಕಿದ ಸಿಂಹವೊಂದು ಡಿಢೀರನೆ ದಿನವಿಡೀ ನಗರದಲ್ಲಿ ಓಡಾಡಿದರೆ, ಜನರ ಪರಿಸ್ಥಿತಿ ಹೇಗಿರಬೇಡ ಅಲ್ಲವೇ…! ಕಾಂಬೋಡಿಯಾದ ಪನಾಮ್ ಪೆನ್ ನಗರದಲ್ಲಿ ಈ ಘಟನೆ ಜರುಗಿದೆ. ಚೀನಾದ ಉದ್ಯಮಿ ಕ್ವಿ ಶಿಯಾವೊ ತನ್ನ ಮನೆಯಲ್ಲಿ ಸಾಕಿಕೊಂಡಿದ್ದ ಸಿಂಹವೊಂದು ಮನೆಯ ತಡೆಗೋಡೆಯನ್ನು ಎಗರಿಕೊಂಡು ರಸ್ತೆಗೆ ಇಳಿದಿದೆ.
ಸುಮಾರು 100 ಕೆ.ಜಿ. ತೂಕದ 1.5 ವರ್ಷದ ಸಾಕು ಸಿಂಹವು ಖುಷಿಯಿಂದ ನಗರದ ಮುಖ್ಯ ರಸ್ತೆಗಳಲ್ಲಿ ತಿರುಗಾಡಿದೆ. ಹಲವು ನಿವಾಸಿಗರು ಭಯಭೀತರಾಗಿ ಅಡಗಿಕೊಂಡರೆ, ಮತ್ತೆ ಕೆಲವರು ಲಾಠಿಗಳಿಂದ ಹೊಡೆದು, ಬೆಂಕಿ ಎಸೆದು ಸಿಂಹವನ್ನು ಓಡಿಸಲು ಯತ್ನಿಸಿದ್ದಾರೆ. ಇದೆಲ್ಲ ವಿಡಿಯೊವನ್ನು ಟ್ವಿಟರ್‍ನಲ್ಲಿ ಹಂಚಿಕೊಂಡಿರುವ ಸ್ಕಾಟ್‍ಲ್ಯಾಂಡ್ ಮೂಲದ ಪತ್ರಕರ್ತ ಆಂಡ್ರೂ ಮ್ಯಾಕ್‍ಗ್ರೆಗಾರ್ ಅವರು, ಕಾಡು ಪ್ರಾಣಿಗಳನ್ನು ಘನತೆಗಾಗಿ ಸಾಕಿಕೊಂಡು, ನಿರ್ಲಕ್ಷ್ಯದಿಂದ ಬೀದಿಗೆ ಬಿಡುವ ಹುಚ್ಚುತನ ಎಷ್ಟು ದಿನ ಮುಂದುವರಿಯಲಿದೆ ಎಂದು ಕಿಡಿಕಾರಿದ್ದಾರೆ.
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಹಸು ಸಾಕುವುದನ್ನು ಕಡ್ಡಾಯಗೊಳಿಸಿ ಎಂದ ಬಿಜೆಪಿ ಸಚಿವ…!
ಅನಾಗರಿಕರಂತೆ ಪ್ರಾಣಿಗಳ ಮೇಲೆ ಕ್ರೌರ್ಯ ಎಸಗುತ್ತಿರುವ ಉದ್ಯಮಿಗಳಿಗೆ ಪಾಠ ಯಾವಾಗ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಜೆ ವೇಳೆಗೆ ಕಾಂಬೊಡಿಯಾ ಪ್ರಧಾನಿ ಹುನ್ ಸೇನ್ ಮಧ್ಯಸ್ಥಿಕೆ ವಹಿಸಿ ಕೃಷಿ ಇಲಾಖೆ ವಶದಲ್ಲಿದ್ದ ಸಿಂಹವನ್ನು ಮಾಲೀಕನಿಗೆ ಎಚ್ಚರಿಕೆ ಸಮೇತ ಒಪ್ಪಿಸಿದ್ದಾರೆ ಎನ್ನಲಾಗಿದೆ.
https://twitter.com/Mgebremedhin/status/1427071563082305537?ref_src=twsrc%5Etfw%7Ctwcamp%5Etweetembed%7Ctwterm%5E1427071563082305537%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fpet-lion-spotted-streets-of-phnom-penh-animal-cruelty-7456484%2F