ಇಸ್ಲಾಮಾಬಾದ್ ನ ಜನವಸತಿ ಪ್ರದೇಶದಲ್ಲಿ ಚಿರತೆ ದಾಳಿ; ಶಾಕಿಂಗ್ ದೃಶ್ಯ ಕ್ಯಾಮರಾದಲ್ಲಿ ಸೆರೆ 18-02-2023 4:45PM IST / No Comments / Posted In: Latest News, Live News, International ಇತ್ತೀಚಿನ ದಿನಗಳಲ್ಲಿ ಚಿರತೆಗಳು ಪದೇ ಪದೇ ದಾಳಿ ಮಾಡುವ ಘಟನೆಗಳು ಹೆಚ್ಚಾಗಿ ಕೇಳಿ ಬರ್ತಿವೆ. ಈಗ ಮತ್ತೆ ಅದೇ ರೀತಿಯ ಘಟನೆ ಪಾಕಿಸ್ತಾನದಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಆರು ಜನರಿಗೆ ಗಂಭೀರ ರೂಪದ ಗಾಯಗಳಾಗಿವೆ. ಕೆಲ ಖದೀಮರು ಪಾಕ್‌ನ ಇಸ್ಲಾಮಾಬಾದ್‌ನ DHA ಹಂತ II ರ ಅನ್ನೊ ವಸತಿ ಪ್ರದೇಶದಲ್ಲಿ ಚಿರತೆಯೊಂದನ್ನು ಕದ್ದು ಸಾಕುತ್ತಿದ್ದರು. ಈ ಮಾಹಿತಿ ತಿಳಿಯುತ್ತಿದ್ದ ಹಾಗೆಯೇ ವನ್ಯಜೀವಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ಅದೇ ಸಮಯದಲ್ಲಿ ಚಿರತೆ ಬೋನಿನಿಂದ ತಪ್ಪಿಸಿಕೊಂಡಿದ್ದು, ಅಧಿಕಾರಿಗಳ ಮೇಲೆ ದಾಳಿ ಮಾಡಿದೆ. ಅಲ್ಲೇ ಇದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಚಿರತೆ ದಾಳಿ ಮಾಡಿರುವ ವಿಡಿಯೋವನ್ನ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಗಾಬರಿಯೊಂಡಿದ್ದ ಚಿರತೆ ಎದುರಿಗಿದ್ದವರ ಮೇಲೆಲ್ಲ ದಾಳಿ ಮಾಡಿ ಓಡಿ ಹೋಗುವ ಪುಯತ್ನ ಮಾಡುತ್ತಿರುವುದನ್ನ ಗಮನಿಸಬಹುದು. ಕೊನೆಯಲ್ಲಿ ಚಿರತೆ ಅಲ್ಲೇ ಇದ್ದ ಮಹಿಳೆಯನ್ನ ಹಿಂಬಾಲಿಸುವುದಲ್ಲದೇ ಆಕೆಯ ಮೇಲೆ ಭಯಂಕರವಾಗಿ ದಾಳಿ ಮಾಡುತ್ತದೆ. ಅಲ್ಲೇ ಇದ್ದ ವ್ಯಕ್ತಿಯೊಬ್ಬ ಚಿರತೆ ಮೇಲೆ ಗುಂಡು ಹಾರಿಸುತ್ತಾನೆ. ಕಾನೂನಿನ ಪ್ರಕಾರ ಕಾಡು ಪ್ರಾಣಿಗಳ ಮೇಲೆ ಗುಂಡು ಹಾರಿಸುವುದು ಅಪರಾಧ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಆದರೂ ಹರಸಾಹಸ ಪಟ್ಟು ವನ್ಯಜೀವಿ ಅಧಿಕಾರಿಗಳು ಚಿರತೆಯನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರ. ಸದ್ಯಕ್ಕೆ ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 324 (ಕೊಲೆಯ ಯತ್ನ ಮತ್ತು 289 (ಪ್ರಾಣಿಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ನಡವಳಿಕೆ) ಅಡಿಯಲ್ಲಿ ಇಸ್ಲಾಮಾಬಾದ್ ಪೊಲೀಸರು ಪುಕರಣವನ್ನು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಚಿರತೆಯನ್ನ ಸೆರೆ ಹಿಡಿದು ಮುಚ್ಚಿಟ್ಟವರನ್ನ ಬಂಧಿಸಿ ಅವರನ್ನ ಕಸ್ಮಡಿಗೆ ತೆಗೆದುಕೊಂಡಿದ್ದಾರೆ. ಈ ರೀತಿಯ ಘಟನೆಗಳು ಪದೇ ಪದೇ ಸಂಭವಿಸುತ್ತಿದ್ದರಿಂದ ಸಿಸಿಟಿವಿಯಲ್ಲಿ ಚಿರತೆಗಳ ದಾಳಿ ಆಗಾಗ ಸೆರೆಯಾಗುತ್ತಲೇ ಇರುತ್ತೆ. ಇವಲ್ಲ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತೆ. Leopard in DHA 2 Islamabad Rawalpindi I hope they don't kill it, use tranquilizer, dart gun if they have it, or try using a net or a cage that can trap the leopard bait him into cage trap Yet another realisation we have exceeded our boundaries these housing societies pic.twitter.com/moUeJT9sVM — Syed Hasnain Raza (@hasnain_sunny) February 16, 2023 Male Leopard is in good health at IWMB’s rescue and rehab centre. IWMB scientific committee will decide next steps for leopard rehabilitation. Leopard has been named Deeaitchay by IWMB staff pic.twitter.com/N9bPc0YHe4 — Islamabad Wildlife Management Board (IWMB) (@WildlifeBoard) February 17, 2023 Leopard attacked a pedestrian in DHA 2,luckily he didn't suffer any life threatening injury. Just couple of days back a leopard was sighted in Bahria Enclave Islamabad aswell, please stop occupying their lands. STOP DEFORESTATION. pic.twitter.com/kMC2OkyzCk — Wahid Zia. (@OmniscientXo) February 16, 2023