ಮಳೆ ಪ್ರೇಮಿಗಳು ಸಾಕಷ್ಟುಮಂದಿ ಇದ್ದಾರೆ. ಪ್ರಾಣಿಗಳಿಗೂ ಮಳೆ ಬಲು ಇಷ್ಟ ಎಂಬಂತೆ ತೋರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೆಹಲಿಯ ನಿವಾಸಿಯೊಬ್ಬರು ತಮ್ಮ ಮನೆಯ ನಾಯಿಯನ್ನು ಮಳೆ ಬರುತ್ತಿದ್ದಂತೆ ಟೆರಸ್ಗೆ ಕರೆದುಕೊಂಡು ಹೋಗಿದ್ದು, ಈ ವೇಳೆ ನಾಯಿ ಖುಷಿಯಿಂದ ಮಳೆಯನ್ನು ಆಸ್ವಾದಿಸುವುದು ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ರೀಲ್ 3.2 ಮಿಲಿಯನ್ ವೀಕ್ಷಣೆ ಪಡೆದಿದ್ದು, 351ಕೆ ಲೈಕ್ ಕೂಡ ಪಡೆದುಕೊಂಡಿದೆ. ಕ್ಲಿಪ್ನಲ್ಲಿ, ವಿಸ್ಕಿ ಎಂಬ ಹೆಸರಿನ ಗೋಲ್ಡನ್ ರಿಟ್ರೈವರ್ ತನ್ನ ಮನೆೆ ಬಾಗಿಲು ತೆರೆಯುತ್ತಿದ್ದಂತೆ ಉತ್ಸಾಹದಿಂದ ತನ್ನ ಬಾಲವನ್ನು ಅಲ್ಲಾಡಿಸುವುದನ್ನು ಕಾಣಬಹುದು.
ಬಳಿಕ ಮೆಟ್ಟಿಲುಗಳ ಮೇಲೆ ಓಡಿ ಟೆರೇಸ್ ಬಾಗಿಲನ್ನು ಬಡಿಯುತ್ತದೆ, ಅದನ್ನು ತೆರೆಯಲು ಕೇಳುತ್ತದೆ. ಅದು ತೆರೆದ ತಕ್ಷಣ, ಅದು ಟೆರೇಸ್ ಮೇಲೆ ಓಡಿ ಮಳೆಯಲ್ಲಿ ನೆನೆಯುತ್ತಾ ಆಸ್ವಾದನೆ ಮಾಡುವುದನ್ನು ನೋಡುವುದಕ್ಕೆ ಖುಷಿ ಎನಿಸುತ್ತದೆ.
ಗಿಜಿಗಿಡುವ ಮಳೆಯನ್ನು ಅನುಭವಿಸುತ್ತ ಜಿಗಿಯುವ ನಾಯಿಯನ್ನು ಗಮನಿಸಿದರೆ ನೃತ್ಯ ಮಾಡುತ್ತಿರುವಂತೆ ತೋರುತ್ತಿದೆ. ಲಗಾನ್ನ ಮಳೆ ಗೀತೆ ಘನಾನ್ ಘನನ್……. ಅನ್ನು ಈ ವಿಡಿಯೊದಲ್ಲಿ ಬಳಸಲಾಗಿದೆ, ಅದು ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ.