ಮದುವೆ ಪ್ರಸ್ತಾಪ ಮಾಡುವ ವೇಳೆ ಅವರ ಮನೆ ನಾಯಿಗೆ ಸಂಡಾಸಿಗೆ ಹೋಗುವ ತುರ್ತು! ಕುಟುಂಬದವರು, ಸ್ನೇಹಿತರ ಸಮ್ಮುಖ ಆತ ತನ್ನ ಗೆಳತಿಗೆ ರಿಂಗ್ ನೀಡಿ ತನ್ನ ಮನದಾಳದ ಮಾತು ಹೇಳುವ ಸಂದರ್ಭದಲ್ಲೇ ಅವರ ಎದುರಿಗೆ ನಾಯಿ ಪ್ರಕೃತಿ ಕರೆ ಪೂರೈಸಿ ಅಲ್ಲಿದ್ದವರಿಗೆ ನಗೆ ತರಿಸಿದೆ.
ಕೆನಡಾದಲ್ಲಿ ಈ ಪ್ರಸಂಗ ನಡೆದಿದ್ದು, ಈ ಸಂದರ್ಭದ 36 ಸೆಕೆಂಡಿನ ವಿಡಿಯೋ ತುಣುಕು ವೈರಲ್ ಆಗಿದ್ದು ನೆಟ್ಟಿಗರಿಗೆ ನಗು ತರಿಸಿದೆ. ನಿಮ್ಮ ನಾಯಿ ಈ ಕ್ಷಣವನ್ನು ಮರೆಯಲಾಗದಂತೆ ಮಾಡಿದೆ. ನಗು ತರಿಸಿದ್ದಕ್ಕೆ ಧನ್ಯವಾದ ಎಂದು ನೆಟ್ಟಿಗರೊಬ್ಬರು ಧನ್ಯವಾದವನ್ನೂ ಅರ್ಪಿಸಿದ್ದಾರೆ.
BIG BREAKING: ದೇಶದಲ್ಲಿ ತಗ್ಗಿದ ಕೊರೊನಾ ಸೋಂಕಿತರ ಸಂಖ್ಯೆ; 24 ಗಂಟೆಯಲ್ಲಿ 15,823 ಜನರಲ್ಲಿ ಸೋಂಕು ಪತ್ತೆ
ಅಕ್ಟೋಬರ್ 2ರಂದು ಪೋರ್ಟ್ ಪ್ರದೇಶದಲ್ಲಿ ಈ ಪ್ರಸಂಗ ನಡೆದಿದೆ. ನಾಯಿ ಆಸ್ಟ್ರೇಲಿಯನ್ ಶೆಫರ್ಡ್ ತನ್ನ ಕೆಲಸ ತಾನು ಮಾಡಿ ತುಂಟಾಟ ಮಾಡಿಕೊಂಡು ತಿರುಗಿದರೆ ಆ ವ್ಯಕ್ತಿ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಸ್ನೇಹಿತೆಗೆ ರಿಂಗ್ ನೀಡಿ ತನ್ನ ಭಾವನೆ ಹಂಚಿಕೊಂಡ. ಆಕೆ ಕೂಡ ಆತನನ್ನು ತಬ್ಬಿ ತನ್ನ ಒಪ್ಪಿಗೆ ನೀಡಿದಳು. ಆದರೆ ಅಲ್ಲಿದ್ದವರು ಮಾತ್ರ ನಾಯಿಯ ಪ್ರವೇಶದಿಂದ ನಗೆ ಗಡಲಲ್ಲಿ ತೇಲಿದರು.