ಇತ್ತೀಚೆಗೆ ಪೆಟ್ ಕ್ಲಿನಿಕ್‌ನಲ್ಲಿ ನಡೆದ ಘಟನೆಯೊಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಮುದ್ದಿನ ನಾಯಿಯೊಂದು ತನ್ನ ಮಾಲೀಕನ ಮೇಲೆ ಇದ್ದಕ್ಕಿದ್ದಂತೆ ಭೀಕರವಾಗಿ ದಾಳಿ ನಡೆಸಿದೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕ್ಲಿನಿಕ್‌ನಲ್ಲಿ ಮಾಲೀಕ ಮತ್ತು ವೈದ್ಯರು ಸೋಫಾದಲ್ಲಿ ಕುಳಿತಿದ್ದರು. ನಾಯಿಯು ಮೊದಲು ಶಾಂತವಾಗಿತ್ತು, ಮಾಲೀಕ ಅದನ್ನು ಮುದ್ದಾಡಿದ್ದು, ಆದರೆ ಕ್ಷಣಾರ್ಧದಲ್ಲಿ ಅದು ಉಗ್ರರೂಪ ತಾಳಿತು.
ಮಾಲೀಕನ ಕೈಯನ್ನು ಬಲವಾಗಿ ಕಚ್ಚಿ, ಅವರನ್ನು ನೆಲಕ್ಕೆ ತಳ್ಳಿದ್ದು, ವೈದ್ಯರು ಭಯದಿಂದ ಓಡಿಹೋದರು. ಮಾಲೀಕ ಧೈರ್ಯದಿಂದ ನಾಯಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.
ನಂತರ ಅವರು ಕ್ಲಿನಿಕ್‌ನ ಬಾಗಿಲು ತೆರೆದು ನಾಯಿಯನ್ನು ಹೊರಗೆ ತಳ್ಳಿದ್ದು, ಈ ಘಟನೆಯಲ್ಲಿ ಮಾಲೀಕನಿಗೆ ಗಂಭೀರವಾದ ಗಾಯಗಳಾಗಿವೆ. ಸಿಸಿಟಿ ವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ನಾಯಿಯ ವರ್ತನೆಯನ್ನು ಖಂಡಿಸಿದರೆ, ಇನ್ನು ಕೆಲವರು ಮಾಲೀಕನ ನಿರ್ಲಕ್ಷ್ಯವನ್ನು ಟೀಕಿಸಿದ್ದಾರೆ.
Pet Dog attacks on a Guy who was Playing with the Dog inside Clinic
pic.twitter.com/PAZaXZRoqS— Ghar Ke Kalesh (@gharkekalesh) February 14, 2025