ಪೆರುವಿನಲ್ಲಿ ಬಸ್ ಕಂದಕಕ್ಕೆ ಉರುಳಿ ಬಿದ್ದು ಕನಿಷ್ಠ 24 ಮಂದಿ ಸಾವನ್ನಪ್ಪಿದ್ದಾರೆ. ಉತ್ತರ ಪೆರುವಿನಲ್ಲಿ 60 ಪ್ರಯಾಣಿಕರಿದ್ದ ಬಸ್ ರಸ್ತೆಯಲ್ಲಿ ಸಾಗುವಾಗ ನಿಯಂತ್ರಣ ತಪ್ಪಿ ಉರುಳಿದ ನಂತರ ಕನಿಷ್ಠ 24 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೆರುವಿನ ಸಾರಿಗೆ ಮೇಲ್ವಿಚಾರಣಾ ಸಂಸ್ಥೆ(SUTRAN) ಹೇಳಿಕೆಯಲ್ಲಿ ಅಪಘಾತವನ್ನು ದೃಢಪಡಿಸಿದೆ. Q’Orianka Tours Aguila Dorada ಎಂಬ ಕಂಪನಿಯ ಬಸ್ ಪೆರುವಿನ ಉತ್ತರ ಭಾಗದಲ್ಲಿರುವ ಎಲ್ ಆಲ್ಟೋ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದೆ.
ಪೆರುವಿನಲ್ಲಿ ರಸ್ತೆ ಅಪಘಾತಗಳು ಸಾಮಾನ್ಯವಾಗಿದೆ, ಅನೇಕ ಚಾಲಕರು ಅನಿಶ್ಚಿತ ರಸ್ತೆಗಳಲ್ಲಿ ಮತ್ತು ಸರಿಯಾದ ತರಬೇತಿಯಿಲ್ಲದೆ ವಾಹನಗಳನ್ನು ನಿರ್ವಹಿಸುತ್ತಾರೆ. 2021 ರಲ್ಲಿ ಆಂಡಿಸ್ ಪರ್ವತಗಳ ಹೆದ್ದಾರಿಯಿಂದ ಬಸ್ ಉರುಳಿ 29 ಜನರು ಸಾವನ್ನಪ್ಪಿದ್ದರು.