alex Certify ಕೊಹ್ಲಿ ತಂಗಿದ್ದ ಕೊಠಡಿಯ ವಿಡಿಯೋ ಚಿತ್ರೀಕರಣ; ವಿರಾಟ್ ಗರಂ ಆಗುತ್ತಿದ್ದಂತೆ ಸಿಬ್ಬಂದಿ ಸಸ್ಪೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಹ್ಲಿ ತಂಗಿದ್ದ ಕೊಠಡಿಯ ವಿಡಿಯೋ ಚಿತ್ರೀಕರಣ; ವಿರಾಟ್ ಗರಂ ಆಗುತ್ತಿದ್ದಂತೆ ಸಿಬ್ಬಂದಿ ಸಸ್ಪೆಂಡ್

ಆಸ್ಟ್ರೇಲಿಯಾ: ಟಿ-20 ವಿಶ್ವಕಪ್​ಗಾಗಿ ಆಸ್ಟ್ರೇಲಿಯಾದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅವರು ತಂಗಿದ್ದ ಹೋಟೆಲ್ ಕೊಠಡಿಯ ವಿಡಿಯೋ ಮಾಡಿದ್ದ ಹೋಟೆಲ್​ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ಯಾರೂ ಇಲ್ಲದ ಸಮಯದಲ್ಲಿ ಕೊಹ್ಲಿಯ ರೂಮ್​ಗೆ ತೆರಳಿದ್ದ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಭಾನುವಾರ ಪರ್ತ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಪಂದ್ಯ ಆಯೋಜಿಸಲಾಗಿತ್ತು. ಹೀಗಾಗಿ ಭಾರತದ ಆಟಗಾರರು ಪರ್ತ್​ನಲ್ಲಿ ತಂಗಿದ್ದ ಹೋಟೆಲ್​ನಿಂದ ಸ್ಟೇಡಿಯಂಗೆ ತೆರಳಿದ್ದರು. ಈ ಸಂದರ್ಭ ಹೋಟೆಲ್​ ಸಿಬ್ಬಂದಿ ಕೊಹ್ಲಿ ಇದ್ದ ಕೊಠಡಿಯೊಳಗೆ ಪ್ರವೇಶಿಸಿ ವಿಡಿಯೋ ಮಾಡಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಕೋಪಗೊಂಡ ಕೊಹ್ಲಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ವಿಡಿಯೋ ವೈರಲ್​ ಬೆನ್ನಲ್ಲೇ ಪರ್ತ್​ ಹೋಟೆಲ್​ ಮಾಲೀಕರು ಕ್ಷಮೆಯಾಚಿಸಿದ್ದಾರೆ. ಕೊಹ್ಲಿ ಮತ್ತು ಭಾರತೀಯ ಕ್ರಿಕೆಟ್ ತಂಡಕ್ಕೆ ಕ್ಷಮೆಯಾಚಿಸಿರುವ ಹೋಟೆಲ್, ವಿಡಿಯೋ ತೆಗೆದುಹಾಕಿದೆ.

”ಅಭಿಮಾನಿಗಳಿಗೆ ತನ್ನ ಮೆಚ್ಚಿನ ಕ್ರಿಕೆಟಿಗನನ್ನು ನೋಡಬೇಕು, ಬೇಟಿಯಾಗಬೇಕು ಎಂಬ ಆಸೆ ಇರುತ್ತದೆ ನಿಜ. ಆ ಭಾವನೆ ನನಗೆ ಅರ್ಥವಾಗುತ್ತದೆ. ಅದನ್ನು ನಾನು ಗೌರವಿಸುತ್ತೇನೆ ಕೂಡ. ಆದರೆ, ಈ ವಿಡಿಯೋ ಮಾತ್ರ ನನ್ನ ಖಾಸಗಿ ವಿಚಾರಕ್ಕೆ ಧಕ್ಕೆ ಬಂದಂತಿದೆ. ನನ್ನ ವೈಯಕ್ತಿಕ ಹೋಟೆಲ್ ರೂಮ್​ನಲ್ಲೇ ನನಗೆ ಪ್ರೈವಸಿ ಇಲ್ಲ ಎಂದಾದರೆ ನನಗೆ ಪರ್ಸನಲ್ ಸ್ಪೇಸ್ ಎಂಬುದು ಎಲ್ಲಿ ಸಿಗುತ್ತದೆ. ಈ ವಿಚಾರದಿಂದ ನಾನು ಸಂತಸವಾಗಿಲ್ಲ. ದಯವಿಟ್ಟು ಜನರ ಖಾಸಗಿ ವಿಚಾರಕ್ಕೆ ಗೌರವ ನೀಡಿ. ಅವರನ್ನು ಮನೋರಂಜನೆ ನೀಡುವ ರೀತಿ ಕಾಣಬೇಡಿ,” ಎಂದು ಕೊಹ್ಲಿ ಬರೆದುಕೊಂಡಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...