ಕೊರೊನಾ ದಾಳಿ, ಲಾಕ್‍ಡೌನ್‍ಗಳ ಪರಿಣಾಮವಾಗಿ ಕೆಲಸ ಕಳೆದುಕೊಂಡ ಜನರ ಆರ್ಥಿಕ ಸಂಕಷ್ಟ ತುಂಬ ಬಿಗಡಾಯಿಸಿದೆ. ನಿತ್ಯ ಜೀವನ ಸಾಗಿಸಲು ಕೂಡ ಸಾಲದ ಮೊರೆಹೋಗುವುದು ಕೆಲವರಿಗೆ ಅನಿವಾರ್ಯವಾಗುತ್ತಿದೆ.
ಕ್ರೆಡಿಟ್ ಕಾರ್ಡ್‍ಗಳ ಮೂಲಕ ಸಾಲ ಪಡೆಯುವುದು ಸುಲಭದ ಆಯ್ಕೆ ಆಗಿದ್ದರೂ ಕೂಡ ಬಡ್ಡಿಗಳು ಅಧಿಕವಾಗಿರುವ ಕಾರಣ ಬ್ಯಾಂಕ್‍ಗಳಿಂದ ಖಾಸಗಿ ಸಾಲ ಪಡೆಯುವುದೇ ಹೆಚ್ಚು ಉತ್ತಮ ಎನ್ನುವುದು ಹಣಕಾಸು ತಜ್ಞರ ಹಿತನುಡಿ. ತುರ್ತು ನಗದು ಅಗತ್ಯವಿದ್ದವರಿಗೆ ಖಾಸಗಿ ಸಾಲ ಪಡೆಯಲು ಕೆಲವು ಟಿಪ್ಸ್ ಇಲ್ಲಿವೆ.
ಬಡ್ಡಿ ದರ ಮಿತಿಯಲ್ಲಿರಲಿ:
ಅನಿವಾರ್ಯತೆ ನೆಪದಲ್ಲಿ ಹೆಚ್ಚಿನ ಬಡ್ಡಿ ನೀಡಿ, ಬಳಿಕ ಹಿಂದಿರುಗಿಸಲಾಗದೆಯೇ ಪರದಾಡಬೇಡಿರಿ. ಪಡೆದುಕೊಂಡ ಸಾಲಕ್ಕಿಂತಲೂ ಭಾರಿ ಮೊತ್ತವನ್ನು ಹೆಚ್ಚಾಗಿ ತೀರಿಸಬೇಕಾಗುತ್ತದೆ. ಪಡೆಯುವ ಹಣ, ಹಾಕುವ ಬಡ್ಡಿಯ ಬಗ್ಗೆ ತಿಳಿದವರಿಂದ ಸರಿಯಾಗಿ ಲೆಕ್ಕ ಹಾಕಿಸಿ ಅರಿತುಕೊಳ್ಳಿರಿ.
ʼ911ʼ ಆಪರೇಟರ್ ಮಾಡಿರುವ ಕೆಲಸ ಕೇಳಿದ್ರೆ ಆಗುತ್ತೆ ಶಾಕ್
ಇತರ ಶುಲ್ಕಗಳ ಬಗ್ಗೆ ಎಚ್ಚರ:
ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಗಳ ಮೂಲಕ ಸಾಲ ಪಡೆಯುವಾಗ ಸೇವಾ ಶುಲ್ಕದ ರೂಪದಲ್ಲಿ ನಿಮ್ಮ ಸಾಲದ ಮೊತ್ತದಲ್ಲಿಯೇ ಸ್ವಲ್ಪ ಮೊತ್ತದ ಹಣವನ್ನು ಕಡಿತಗೊಳಿಸಿಕೊಳ್ಳಲಾಗುತ್ತದೆ. ಇದರ ಬಗ್ಗೆ ಜಾಗರೂಕರಾಗಿರಿ. ಈ ಶುಲ್ಕವೂ ಕೂಡ ಸಾಲದ ಒಟ್ಟಾರೆ ಮೊತ್ತಕ್ಕೆ ಸೇರ್ಪಡೆಯಾಗಿ, ಅದಕ್ಕೂ ನೀವೇ ಬಡ್ಡಿ ಕಟ್ಟುತ್ತಿರುತ್ತೀರಿ.
ಇಎಂಐ ಅಥವಾ ಕಂತುಗಳ ಲೆಕ್ಕಾಚಾರ:
ಸಾಲ ಪಡೆಯುವುದಕ್ಕಿಂತ ದೊಡ್ಡ ವಿಚಾರವೆಂದರೆ ಅದನ್ನು ವ್ಯವಸ್ಥಿತವಾಗಿ ಹಿಂದಿರುಗಿಸುವುದು. ಬಹಳಷ್ಟು ಜನರು ಒಂದು, ಎರಡು ಇಎಂಐ ಅಥವಾ ಕಂತುಗಳನ್ನು ಪಾವತಿಸಿದ ಬಳಿಕ ಮುಂದಿನ ಕಂತಿಗೆ ಹಣ ಜೋಡಿಸಲಾಗದೆಯೇ ಸಾಲ ನೀಡಿದವರಿಂದ ಛೀಮಾರಿ ಹಾಕಿಸಿಕೊಳ್ಳುವ ಕೆಟ್ಟ ಸ್ಥಿತಿ ತಂದುಕೊಳ್ಳುತ್ತಾರೆ.
ಇನ್ನೊಂದು, ವಿಚಾರವೆಂದರೆ ಸಾಲದ ಜತೆಗೆ ಬಡ್ಡಿಯನ್ನು ಸೇರಿಸಿ ವಿಂಗಡಿಸಲಾಗುವ ಮಾಸಿಕ ಕಂತುಗಳು ಅಥವಾ ಇಎಂಐ ಕಟ್ಟಲು ನಿಮಗೆ ಬಹಳ ಅನುಕೂಲಕರ ಎನಿಸಿದರೂ ಭಾರಿ ಮೊತ್ತವನ್ನು ಹಿಂದಿರುಗಿಸುವಂತಹ ಮೋಸದ ಜಾಲಕ್ಕೆ ಬೀಳಬೇಡಿರಿ. ಪಡೆದಿದ್ದು 50 ಸಾವಿರ ರೂ. ಆದರೆ, ಎರಡು ವರ್ಷಗಳಲ್ಲಿ ಸಾಲ ನೀಡಿದವರಿಗೆ ಹಿಂದಿರುಗಿಸಿದ್ದು 1 ಲಕ್ಷ ರೂ. ಆಗಬಾರದಲ್ಲವೇ?
ಬಡ್ಡಿ ಇರಲಿ, ಆದರೆ ದುರಾಸೆಯ ಬಡ್ಡಿಗೆ ಬಲಿಯಾಗಬೇಡಿ. ಬ್ಯಾಂಕ್‍ಗಳಲ್ಲಿ ಈ ಮೋಸದ ಜಾಲ ಇರುವುದಿಲ್ಲ. ಹಾಗಾಗಿ ಬ್ಯಾಂಕ್‍ಗಳಲ್ಲಿ ಖಾಸಗಿ ಸಾಲ ಪಡೆಯುವುದೇ ಬೆಸ್ಟ್, ಆದರೆ ಕೆಲವು ದಾಖಲೆಗಳು ಇಲ್ಲದಾಗ ಖಾಸಗಿಯವರಿಂದಲೇ ಸಾಲ ಪಡೆಯುವ ಅನಿವಾರ್ಯತೆಯೂ ಇರುತ್ತದೆ.
ಕ್ರೆಡಿಟ್ ಸ್ಕೋರ್:
ಸದ್ಯದ ಮಟ್ಟಿಗೆ ಬ್ಯಾಂಕ್‍ಗಳ ಮುಖಾಂತರ ಪಡೆಯುವ ಎಲ್ಲ ರೀತಿಯ ಸಾಲಗಳಿಗೆ ಕ್ರೆಡಿಟ್ ಸ್ಕೋರ್ ಅನ್ನು ಲೆಕ್ಕ ಹಾಕಲಾಗುತ್ತದೆ. ಇದು 800ಕ್ಕಿಂಂತ ಹೆಚ್ಚಿರಬೇಕು. ಹಿಂದೆ ಯಾವುದೇ ಸಾಲ ಪಡೆದು, ಸರಿಯಾಗಿ ಕಟ್ಟಿಲ್ಲವಾದರೆ ಈ ಸ್ಕೋರ್ ಇಳಿಕೆಯಾಗಿರುತ್ತದೆ. ಆಗ ಪುನಃ ಸಾಲ ಪಡೆಯುವುದು ಕಷ್ಟವಾಗುತ್ತದೆ.