ಆದಾಯ ತೆರಿಗೆ ಸಂಗ್ರಹ ವಿಷ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ಸುದ್ದಿ ಹೊರಬಿದ್ದಿದೆ. 12 ವರ್ಷಗಳಲ್ಲಿ ಆಗದ ಕೆಲಸ ಈ ಬಾರಿ ಆಗಿದೆ. ಕೇಂದ್ರ ಸರ್ಕಾರ 2020-21ರ ಹಣಕಾಸು ವರ್ಷದ ಡೇಟಾವನ್ನು ಮಂಡಿಸಿದೆ. 12 ವರ್ಷಗಳಲ್ಲೇ ಮೊದಲ ಬಾರಿಗೆ ವೈಯಕ್ತಿಕ ಆದಾಯ ತೆರಿಗೆ ಸಂಗ್ರಹವು ಕಾರ್ಪೊರೇಟ್ ತೆರಿಗೆಗಿಂತ ಹೆಚ್ಚಾಗಿದೆ. ಅಂದರೆ ಸಾಮಾನ್ಯ ತೆರಿಗೆದಾರರು, ಕಂಪನಿ ಮತ್ತು ನಿಗಮಗಳಿಗಿಂತ ಹೆಚ್ಚಿನ ತೆರಿಗೆ ಪಾವತಿಸಿದ್ದಾರೆ.
ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, 2021 ರ ಆರ್ಥಿಕ ವರ್ಷದಲ್ಲಿ 4.69 ಲಕ್ಷ ಕೋಟಿ ರೂಪಾಯಿ ಆದಾಯ ತೆರಿಗೆ ಸಂಗ್ರಹವಾಗಿದ್ದು, ಕಾರ್ಪೊರೇಟ್ ತೆರಿಗೆ ಸಂಗ್ರಹವು 4.57 ಲಕ್ಷ ಕೋಟಿ ರೂಪಾಯಿಯಾಗಿದೆ. ವೈಯಕ್ತಿಕ ಆದಾಯ ತೆರಿಗೆ 12,000 ಕೋಟಿ ರೂಪಾಯಿಗಿಂತ ಹೆಚ್ಚಿದೆ.
2020-21ರ ಆರ್ಥಿಕ ವರ್ಷದಲ್ಲಿ, ಕಾರ್ಪೊರೇಟ್ ಮತ್ತು ವೈಯಕ್ತಿಕ ಆದಾಯ ತೆರಿಗೆ ಎರಡರಲ್ಲೂ ಇಳಿಕೆ ಕಂಡುಬಂದಿದೆ. ಕಾರ್ಪೊರೇಟ್ ತೆರಿಗೆ ಶೇಕಡಾ 18 ರಷ್ಟು ಮತ್ತು ವೈಯಕ್ತಿಕ ಆದಾಯ ತೆರಿಗೆ ಶೇಕಡಾ 2.3 ರಷ್ಟು ಕಡಿಮೆಯಾಗಿದೆ. 2019 ರ ಸೆಪ್ಟೆಂಬರ್‌ನಲ್ಲಿ ಮೋದಿ ಸರ್ಕಾರವು ಕಾರ್ಪೊರೇಟ್ ತೆರಿಗೆ ದರವನ್ನು ಶೇಕಡಾ 10 ರಷ್ಟು ಕಡಿತಗೊಳಿಸಿತ್ತು. ಇದು ಈ ಇಳಿಕೆಗೆ ಕಾರಣವಾಗಿದೆ.