ಬೆಂಗಳೂರು: ವೈಯಕ್ತಿಕ ದ್ವೇಷಕ್ಕೆ ಖಾಸಗಿ ಮಾಹಿತಿ ಕೇಳುವಂತಿಲ್ಲ ಎಂದು ಕರ್ನಾಟಕ ಮಾಹಿತಿ ಆಯೋಗ ಮಹತ್ವದ ಆದೇಶ ನೀಡಿದೆ.
ಸರ್ಕಾರಿ ನೌಕರರು ಸಿಬ್ಬಂದಿಗಳ ಸ್ವವಿವರ ಹಾಗೂ ಸೇವಾ ಪುಸ್ತಕ ಖಾಸಗಿ ಮಾಹಿತಿಯಾಗಿದೆ. ವೈಯಕ್ತಿಕ ದ್ವೇಷಕ್ಕೆ ಅಂತಹ ಮಾಹಿತಿಯನ್ನು ಕೋರಿದಾಗ ಅದನ್ನು ನೀಡಲು ಆಗುವುದಿಲ್ಲ ಎಂದು ಮಾಹಿತಿ ಆಯೋಗ ತಿಳಿಸಿದೆ.
ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಒಬ್ಬರ ವಿರುದ್ಧ ಮಾಹಿತಿ ಕೋರಿ ಕೆ.ಎಸ್. ರವಿಕುಮಾರ್ ಸಲ್ಲಿಸಿದ್ದ 2 ನೇ ಮೇಲ್ಮನವಿಯನ್ನು ತಿರಸ್ಕರಿಸಿದ ಕರ್ನಾಟಕ ಮಾಹಿತಿ ಆಯೋಗ ಹೀಗೆ ಆದೇಶಿಸಿದೆ.
ಆಯೋಗದ ಅಧ್ಯಕ್ಷ ಎನ್.ಸಿ. ಶ್ರೀನಿವಾಸ್ ನೇತೃತ್ವದ ವೈಯಕ್ತಿಕ ದ್ವೇಷಕ್ಕೆ ಮಾಹಿತಿ ಕೇಳುವಂತಿಲ್ಲ ಎಂದು ಆದೇಶ ನೀಡಿದೆ. ಅರ್ಜಿದಾರರು ಇಂಜಿನಿಯರ್ ವಿರುದ್ಧ ಸೇಡಿನ ಹಿನ್ನೆಲೆಯಲ್ಲಿ ಮಾಹಿತಿ ಕೇಳಿದ್ದು ಅದನ್ನು ನೀಡಲಾಗದು ಎಂದು ಹೇಳಲಾಗಿದೆ.